ಗಂಜಾಂ: ಮಾಘ ಸ್ನಾನದಲ್ಲಿ ಮಿಂದೆದ್ದ ಭಕ್ತರು

7

ಗಂಜಾಂ: ಮಾಘ ಸ್ನಾನದಲ್ಲಿ ಮಿಂದೆದ್ದ ಭಕ್ತರು

Published:
Updated:

ಶ್ರೀರಂಗಪಟ್ಟಣ: ಮಾಘ ಹುಣ್ಣಿಮೆ ಅಂಗವಾಗಿ ಸಮೀಪದ ಗಂಜಾಂನ ನಿಮಿಷಾಂಬ ದೇವಾಲಯ ಸಮೀಪ ಕಾವೇರಿ ನದಿಯಲ್ಲಿ ಸಹಸ್ರಾರು ಭಕ್ತರು ಮಾಘ ಸ್ನಾನ ಮಾಡಿದರು.ದೇವಾಲಯದಲ್ಲಿ ಮಂಗಳವಾರ ಮುಂಜಾನೆ 2.30ರಿಂದಲೇ ಪೂಜೆ. ಅಭಿಷೇಕಗಳು ಶುರುವಾದವು. ಭಕ್ತರು ಚುಮುಚುಮು ಚಳಿಯಲ್ಲೇ ನದಿಗೆ ಇಳಿದು ಸ್ನಾನ ಮಾಡಿ, ನಾರು ಮಡಿಯಲ್ಲಿ ದೇವಿಯ ದರ್ಶನ ಪಡೆದರು. ಭಕ್ತರು ಹೆಚ್ಚು ಇದ್ದುದರಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ಹೊರ ಭಾಗದಲ್ಲಿ ಎಲ್‌ಸಿಡಿ ಅಳವಡಿಸಲಾಗಿತ್ತು. ಮುಂಜಾನೆಯಿಂದ ಸಂಜೆ 4 ಗಂಟೆ ವರೆಗೆ ಪ್ರಸಾದ ವಿನಿಯೋಗ ನಡೆಯಿತು.ಪಟ್ಟಣದ ಸೋಪಾನ ಕಟ್ಟೆ, ಪಶ್ಚಿಮ ವಾಹಿನಿ, ಗೋಸಾಯಿ ಘಾಟ್ ಮತ್ತು ಸಂಗಮ ಸ್ಥಳಗಳಿಗೆ ಮಂಗಳವಾರ ಹೆಚ್ಚಿನ ಭಕ್ತರು ಆಗಮಿಸಿ ಮಾಘ ಸ್ನಾನ ಮಾಡಿದರು. ಶ್ರೀರಂಗನಾಥಸ್ವಾಮಿ ದೇವಾಲಯ, ಗೋಸಾಯಿ ಘಾಟ್‌ನ ಕಾಶಿವಿಶ್ವನಾಥ ದೇವಾಲಯಗಳಲ್ಲಿ ಕೂಡ ವಿಶೇಷ ಪೂಜೆಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry