ಶನಿವಾರ, ಮೇ 28, 2022
31 °C

ಗಂಜಾಂ ಶಾಲೆಯಲ್ಲಿ ಕಾಂಪೌಂಡ್‌ಗೇ ಆರ್‌ಸಿಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಸಮೀಪದ ಗಂಜಾಂನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಕಾಂಪೌಂಡ್ ಮೇಲೆ ಆರ್‌ಸಿಸಿ ಹಾಕಿ ಅಡುಗೆ ಮನೆ ಮತ್ತು ಶೌಚಾಲಯ ನಿರ್ಮಿಸಲಾಗುತ್ತಿದೆ.

ಶಾಲೆಯ 6 ಅಡಿ ಎತ್ತರದ ಹಳೆಯ ಕಾಂಪೌಂಡ್ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಮೂರು ಅಡಿ ಎತ್ತರದ ಗೋಡೆ ನಿರ್ಮಿಸಿ ಅದರ ಮೇಲೆ ಸಿಮೆಂಟ್ ಮತ್ತು ಕಬ್ಬಿಣದ ಚಾವಣಿ ಹಾಕಲಾಗಿದೆ.ಕೇವಲ ಒಂದು ಅಡಿ ತಳಪಾಯದ ಮೇಲೆ ನಿರ್ಮಿಸಿರುವ ಕಾಂಪೌಂಡ್ ಮೇಲೆ ಆರ್‌ಸಿಸಿ ಹಾಕಲಾಗುತ್ತಿದೆ. ಕಾಂಪೌಂಡ್ ಅಲ್ಲಲ್ಲಿ ಬಿರುಕು ಬಿಟ್ಟಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಆರ್‌ಸಿಸಿ ಹಾಕಲಾಗುತ್ತಿದೆ. ಕಾಮಗಾರಿ ಗುಣಮಟ್ಟದ ಬಗ್ಗೆಯೂ ಶಂಕೆ  ವ್ಯಕ್ತವಾಗಿದೆ. ಶಿಥಿಲಗೊಂಡಿರುವ ಕಾಂಪೌಂಡ್ ಮೇಲೆ ಆರ್‌ಸಿಸಿ ಹಾಕುತ್ತಿರುವುದರಿಂದ ಕಟ್ಟಡ ಕುಸಿಯುವ ಸಾಧ್ಯತೆ ಇದೆ ಎಂದು ಶಾಲೆಯ ಎಸ್‌ಡಿಎಂಸಿ ಸದಸ್ಯರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯ ಶಿಕ್ಷಕ ಸಿ.ಎಂ.ಹೊನ್ನರಾಜು, `2006 ಎಸ್‌ಆರ್ ದರದ ಪ್ರಕಾರ ಕಾಮಗಾರಿ ನಡೆಯುತ್ತಿದೆ. ರೂ.1.53 ಲಕ್ಷದಲ್ಲಿ ಅಡುಗೆ ಮನೆ ಮತ್ತು ಶೌಚಾಲಯ ಎರಡನ್ನೂ ನಿರ್ಮಿಸಲಾಗುತ್ತಿದೆ. ಇಲಾಖೆ ಎಂಜಿನಿಯರ್ ನವೀನ್ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟದ ಬಗ್ಗೆ ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ~ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.