ಶುಕ್ರವಾರ, ಮೇ 14, 2021
31 °C

ಗಂಜಿ ಕೇಂದ್ರ ಆರಂಭಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ಮುಂಗಾರು ಮಳೆಯಿಲ್ಲದೇ ಚಿತ್ರಾವತಿ ಬ್ಯಾರೇಜಿನ ನೀರು ಬರಿದಾಗುತ್ತಿದೆ. ಮುಂದಿನ 15 ದಿನ ಮಾತ್ರ ನೀರು ಪೂರೈಸಬಹುದು. ಕೂಡಲೇ ಸರ್ಕಾರ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡುವುದರ ಜತೆ ಕಾರ್ಯಯೋಜನೆ ರೂಪಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ  ಡಾ.ಜಿ.ಪರಮೇಶ್ವರ್ ತಿಳಿಸಿದರು.ಬರ ಪರಿಸ್ಥಿತಿ ವೀಕ್ಷಣೆಗೆ ಪಟ್ಟಣದ ಚಿತ್ರಾವತಿ ಬ್ಯಾರೇಜಿಗೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಪರಗೋಡು ಚಿತ್ರಾವತಿ ಬ್ಯಾರೇಜಿನಲ್ಲಿ ಸುಮಾರು 1.7 ಮಿಲಿ ಲೀಟರ್ ಶೇಖರಣೆ ಆಗುವ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದರಿಂದ ಬಾಗೇಪಲ್ಲಿ ಹಾಗೂ ಗುಡಿಬಂಡೆ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ~ ಎಂದರು.`ಸಕಾಲದಲ್ಲಿ  ಮುಂಗಾರು ಮಳೆ ಬಾರದಿ ರುವುದರಿಂದ ನೀರಿನ ಸಮಸ್ಯೆ ತಲೆದೋರಿದೆ. ರಾಜ್ಯದಲ್ಲಿ ಬರ ಇದೆ. ಸರ್ಕಾರ ಈ ಕೂಡಲೇ ಕುಡಿಯುವ ನೀರು, ಮೇವು ಹಾಗು ರೈತರ ಸಾಲ ಮನ್ನಾ ಮಾಡಬೇಕು. ಪ್ರತಿ ಗ್ರಾಮಾಂತರ ಪ್ರದೇಶದಿಂದ ಸುಮಾರು 100ರಿಂದ 200 ಮಂದಿ ಗೂಳೆ ಹೊರಡುತ್ತಿದ್ದಾರೆ. ಅಗತ್ಯವಿರುವ ಕೇಂದ್ರಗಳಲ್ಲಿ ಗೋಶಾಲೆ ಹಾಗೂ ಗಂಜಿ ಕೇಂದ್ರಗಳನ್ನು ತೆರೆಯಬೇಕು~ ಎಂದು ತಿಳಿಸಿದರು.ರಾಜಕೀಯ ಸಲ್ಲ: ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ಅಂತರ್ಜಲ ಕುಸಿದಿದೆ. ಸಾವಿರ ಅಡಿ ಕೊರೆ ದರೂ ನೀರು ಸಿಗದೇ ರೈತರು ನರಳುವ ಪರಸ್ಥಿತಿ ಇದೆ. ಇಂತಹ ಸಂಧರ್ಭದಲ್ಲಿ ರಾಜಕೀಯ ಗಿಂತ ಜನತೆ ಸಮಸ್ಯೆ ಮುಖ್ಯವಾಗಿದೆ.

 

ರಾಜಕೀಯ ಏನೇ ಇರಲಿ, ಸಚಿವರು, ಶಾಸಕರು ಬರದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕೊಡಿಸಬೇಕು ಎಂದು ತಿಳಿಸಿದರು.  ಶಾಸಕ ವಿ.ಮುನಿಯಪ್ಪ, ಜಿ.ಪಂ.ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಮುಖಂಡರಾದ ಎಂ.ಆಂಜನಪ್ಪ, ಎಚ್.ಎಸ್.ನರೇಂದ್ರ  ಮತ್ತಿ ತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.