ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಸರ ದೊಡ್ಡ ಸ್ತನ

ಅಂಕುರ 32
Last Updated 13 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಹಾರ್ಮೋನಿನ ಏರುಪೇರಿನಿಂದಾಗಿ ಗಂಡು ಮಕ್ಕಳಲ್ಲೂ ಸ್ತನದ ಬೆಳವಣಿಗೆಯಾದಂತೆ ಕಾಣಿಸಿಕೊಳ್ಳಬಹುದು. ಬಹುತೇಕ ಜನರಲ್ಲಿ
ಇದು ದಿನಗಳೆದಂತೆ ತಾನೇ ಸರಿಯಾಗುತ್ತದೆ. ವೈದ್ಯಕೀಯದಲ್ಲಿ ಇದಕ್ಕೆ ಗೈನಕೋಮಾಸ್ಟಿಯಾ ಎನ್ನುತ್ತಾರೆ.

ನಾನು 16 ವರ್ಷದ ಹುಡುಗ. ನನ್ನಲ್ಲಿ ಎದೆಯೂತ ಕಂಡುಬರುತ್ತಿದೆ. ಇದರಿಂದಾಗಿ ನನ್ನಲ್ಲಿ ಖಿನ್ನತೆ ಹಾಗೂ ಹಿಂಜರಿಕೆ ಮೂಡುತ್ತಿದೆ. ನನ್ನ ಸ್ನೇಹಿತರೂ ನನ್ನ ಎದೆಯ ಬಗ್ಗೆ ಹಾಸ್ಯ ಮಾಡುತ್ತಾರೆ. ಟೀಶರ್ಟ್‌ ಧರಿಸುವುದನ್ನೇ ಬಿಟ್ಟುಬಿಟ್ಟಿದ್ದೇನೆ. ಹುಡುಗರೊಂದಿಗೆ ಈಜಲು ಹೋಗುವುದಿಲ್ಲ. ಸ್ತನಗಳ ಆಕಾರದ ಈ ಬದಲಾವಣೆಯು ನನ್ನನ್ನು ಚಿಂತೆಎಗೀಡು ಮಾಡಿದೆ. ದಯಮಾಡಿ ಸಹಾಯ ಮಾಡಿ...

ಇಂಥ ಹಲವಾರು ಮೇಲ್‌ಗಳು ನಮ್ಮನ್ನು ವಿವರ ಕೇಳಿ ಬರುತ್ತಿವೆ. ಅಚ್ಚರಿಯ ಸಂಗತಿಯೆಂದರೆ, ಪುರುಷರಲ್ಲಿ ಸ್ತನ ಬೆಳೆಯುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಅರ್ಧಕ್ಕಿಂತ ಹೆಚ್ಚು ಪುರುಷರಲ್ಲಿ ಅವರ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಎದೆಯ ಸುತ್ತ ಶೇಖರವಾಗುವ ಕೊಬ್ಬಿನ ಬಗೆಗೆ ಚಿಂತಿತರಾಗಿರುತ್ತಾರೆ. ಆದರೆ ಯಾರೊಂದಿಗೂ ಚರ್ಚಿಸುವುದಿಲ್ಲ. ತಮ್ಮ ವೈದ್ಯರೊಡನೆಯೂ ಮನಬಿಚ್ಚಿ ಮಾತನಾಡಲು ಮುಜುಗರ ಪಡುತ್ತಾರೆ.

ಗೈನೆಕೋಮಾಸ್ಟಿಯಾ (ಗಂಡು–ಸ್ತನವೆಂದು ಗುರುತಿಸಲಾಗುತ್ತದೆ) ಪುರುಷನ ಸ್ತನದ ಸುತ್ತಳತೆಯಲ್ಲಿ ಕೊಬ್ಬು ಶೇಖರಣೆಗೊಂಡು ಹೆಣ್ಣುಮಕ್ಕಳ ಸ್ತನದಂತೆ ಕಾಣಿಸುತ್ತದೆ. ಮಾಂಸಲದಂತೆ ಎನಿಸುವ ಈ ಭಾಗವು ತೊಟ್ಟಿನ ಸುತ್ತಲೂ ಬೆಳೆಯುತ್ತದೆ. ಶೇ 50ರಷ್ಟು ಜನರಲ್ಲಿ ಎರಡೂ ಎದೆಗಳಲ್ಲೂ ಈ ಬೆಳವಣಿಗೆಕಂಡು ಬರುತ್ತದೆ.

ಗೈನೆಕೋಮಾಸ್ಟಿಯಾ ಯಾವುದೇ ವಯಸ್ಸು ಅಥವಾ ಎಷ್ಟೇ ತೂಕದವರಿದ್ದರೂ ಕಾಣಿಸಿಕೊಳ್ಳಬಹುದು. ಗಂಡಸರ ಸ್ತನದಂತೆ ಕಾಣಿಸಿಕೊಳ್ಳುವ ಇದು ಸಹಜವಾದ ಗೈನೆಕೋಮಾಸ್ಟಿಯಾ ಅಲ್ಲ. ಗೈನೇಕೋಮಾಸ್ಟಿಯಾದಲ್ಲಿ ನೋವಿರುವ ಮಾಂಸಲದಂಥ ಬೆಳವಣಿಗೆಯನ್ನು ಕಾಣಬಹುದಾಗಿರುತ್ತದೆ. ಇದು ದೊಡ್ಡದಾಗಿ ಬೆಳೆದಷ್ಟೂ ನೋವುದಾಯಕವಾಗಿರಬಹುದು.

ಇದು ಸಾಮಾನ್ಯ ಸಮಸ್ಯೆಯೇ?
ಪ್ರೌಢಾವಸ್ಥೆಗೆ ಬರುತ್ತಿರುವ ಹುಡುಗರಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ. ಪ್ರೌಡಾವಸ್ಥೆಗೆ ಬಂದಿರುವ ಅರ್ಧಕ್ಕಿಂತ ಹೆಚ್ಚು ಜನ ಪುರುಷರನ್ನು ಈ ಸಮಸ್ಯೆ ಕಾಡುತ್ತದೆ. ದಿನಕಳೆದಂತೆ ಮಾಯವೂ ಆಗುತ್ತದೆ. ಆದರೆ ಒಂದು ಮೂರರಷ್ಟು ಗಂಡಸರಲ್ಲಿಇದೊಂದು ಸಮಸ್ಯೆಯ ಸ್ವರೂಪದಲ್ಲಿ ಬೆಳೆಹಬಹುದು.

13–14 ವರ್ಷದ ಹುಡುಗರಲ್ಲಿ ಸಾಮಾನ್ಯವಾಗಿ ಶೇ 65ರಷ್ಟು ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಪ್ರೌಢಾವಸ್ಥೆಯಲ್ಲಿ ಆಗುವ ಹಾರ್ಮೋನಿನ ಏರುಪೇರಿನಿಂದಾಗಿ ಈ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ಆದರೆ ದಿನಗಳೆದಂತೆ ಇದು ತಾನೇ ಮಾಯವಾಗುತ್ತದೆ.

ಗೈನೆಕೊಮಾಸ್ಟಿಯಾಕ್ಕೆ ಕಾರಣವೇನು?
ಆ್ಯಂಡ್ರೋಜನ್‌ ಗ್ರಂಥಿಯು ಮಕ್ಕಳಲ್ಲಿ ಪುರುಷರ ಗುಣಲಕ್ಷಣಗಳನ್ನು ನೀಡುತ್ತವೆ. ಮೈ ಮೇಲೆ ಕೂದಲು ಬೆಳೆಯುವುದು, ಸ್ನಾಯುಗಳು ಬಿರುಸಾದ ಸ್ವರೂಪ ಪಡೆದುಕೊಳ್ಳುವುದು,  ಧ್ವನಿ ಒಡೆಯುವುದು ಮುಂತಾದವುಗಳಿಗೆಲ್ಲ ಆ್ಯಂಡ್ರೋಜನ್‌ ಕಾರಣವಾಗಿರುತ್ತದೆ. ಈಸ್ಟ್ರೋಜನ್‌ನಿಂದ ಹೆಣ್ಣುಮಕ್ಕಳ ದೈಹಿಕ ಬದಲಾವಣೆಗಳು ಕಂಡು ಬರುತ್ತವೆ. ಎಲ್ಲ ಪುರುಷರಲ್ಲಿಯೂ ಈ ಎರಡೂ ಗ್ರಂಥಿಗಳಿರುತ್ತವೆ.
ಈ ಹಾರ್ಮೋನುಗಳ ಪ್ರಮಾಣದಲ್ಲಿ ಏರುಪೇರಾದಾಗ ಇಂಥ ದೈಹಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಥವಾ ದೇಹವು ಉತ್ಪತ್ತಿಯಾದ ಈ ಹಾರ್ಮೋನುಗಳನ್ನು ಹೇಗೆ ಬಳಸಿಕೊಳ್ಳುತ್ತದೆ ಮತ್ತು ಸ್ಪಂದಿಸುತ್ತದೆ ಎನ್ನುವುದರ ಮೇಲೆಯೂ ಸ್ತನಗಳ ಬೆಳವಣಿಗೆಗೆ ಕಾರಣಗಳಾಗಬಹುದು. ಟೆಸ್ಟೊಸ್ಟ್ರಾನ್‌ ಹಾಗೂ ಈಸ್ಟ್ರೋಜನ್‌ಗಳಲ್ಲಿನ ಅನುಪಾತದಲ್ಲಿ ಬದಲಾವಣೆ ಬಂದಾಗ ಪುರುಷರಲ್ಲಿ ಟೆಸ್ಟೊಸ್ಟ್ರಾನ್‌ ಪ್ರಮಾಣ ಕಡಿಮೆಯಾಗುತ್ತದೆ. ಆಗ ಈಸ್ಟ್ರೋಜನ್‌ ಪ್ರಮಾಣದ ಬಳಕೆ ದೇಹದಲ್ಲಿ ಹೆಚ್ಚಳವಾಗಿದ್ದರೆ ಸ್ತನದ ಸುತ್ತ ಕೊಬ್ಬಿನಂಶ ಬೆಳೆದಂತೆ ಕಾಣಿಸಿಕೊಳ್ಳುತ್ತದೆ.

ಬಹಳಷ್ಟು ಸಲ ಹುಟ್ಟುವಾಗಲೇ ಗಂಡುಮಕ್ಕಳಿಗೆ ಎದೆಯ ಸುತ್ತಲೂ ಕೊಬ್ಬಿನಂಶ ಇರುತ್ತದೆ. ಇದಕ್ಕೆ ಗರ್ಭಾವಸ್ಥೆಯಲ್ಲಿ ಅಮ್ಮನ ಮೂಲಕ ಪಡೆದಿರುವ ಈಸ್ಟ್ರೋಜನ್‌ ಹಾರ್ಮೋನು ಕಾರಣವಾಗಿರುತ್ತದೆ. ಹುಟ್ಟಿನ ನಂತರ ಈಸ್ಟ್ರೋಜನ್‌ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತದೆ. ಆ ಕೊಬ್ಬಿನಂಶವೂ ಕರಗುತ್ತದೆ. ಹೀಗೆ ಇದು ತಾತ್ಕಾಲಿಕ ಬೆಳವಣಿಗೆಯೂ ಆಗಿರುತ್ತದೆ. ಪ್ರೌಢಾವಸ್ಥೆಗೆ ತಲುಪಿದಾಗಲೂ ಇಂಥ ಏರುಪೇರುಗಳು ಕಾಣಿಸಿಕೊಳ್ಳುವುದು ಸಹಜವಾಗಿರುತ್ತದೆ. ಆದರೆ ಕೇವಲ 20ರಲ್ಲಿ ಒಬ್ಬ ಹುಡುಗನಿಗೆ ಮಾತ್ರ ತಾರುಣ್ಯ ಕಳೆದರೂ ಈ ಸಮಸ್ಯೆ ಉಳಿದುಕೊಳ್ಳಬಹುದು.  ಹಾಗೆಯೇ ಪುರುಷನೊಬ್ಬ ಮಧ್ಯವಯಸ್ಕನಾಗುತ್ತಿದ್ದಂತೆಯೇ ಈ ಹಾರ್ಮೋನುಗಳ ಏರುಪೇರು ಆರಂಭವಾಗುತ್ತದೆ. ಸಹಜವಾಗಿಯೇ ಟೆಸ್ಟ್ರೊಜನ್‌ ಉತ್ಪನ್ನದ ಪ್ರಮಾಣ ಕಡಿಮೆಯಾಗುತ್ತದೆ. ಈಸ್ಟ್ರೋಜನ್‌ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಆಗ ಈ ಸಮಸ್ಯೆ ಕಂಡು ಬರುತ್ತದೆ.
ಮಾಹಿತಿಗೆ: info@manipalankur.com  99450 48833

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT