ಗಂಭೀರ್ ಶತಕದ ವೈಭವ

7
ಕ್ರಿಕೆಟ್: ಅಭ್ಯಾಸ ಪಂದ್ಯದಲ್ಲೇ ಪರದಾಡಿದ ಆಸ್ಟ್ರೇಲಿಯಾದ ಬೌಲರ್‌ಗಳು

ಗಂಭೀರ್ ಶತಕದ ವೈಭವ

Published:
Updated:
ಗಂಭೀರ್ ಶತಕದ ವೈಭವ

ಚೆನ್ನೈ (ಪಿಟಿಐ/ಐಎಎನ್‌ಎಸ್): ಟೆಸ್ಟ್ ಕ್ರಿಕೆಟ್ ತಂಡದಿಂದ ಸ್ಥಾನ ಕಳೆದುಕೊಂಡಿರುವ ಗೌತಮ್ ಗಂಭೀರ್ ಅಭ್ಯಾಸ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಫಾರ್ಮ್ ಕಂಡುಕೊಂಡಿರುವ ಸುಳಿವು ನೀಡಿದ್ದಾರೆ.ಗುರು ನಾನಕ್ ಕಾಲೇಜ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಮೂರು ದಿನಗಳ ಪಂದ್ಯದಲ್ಲಿ ಭಾರತ `ಎ' ತಂಡವನ್ನು ಮುನ್ನಡೆಸುತ್ತಿರುವ ಗಂಭೀರ್ ಆಸ್ಟ್ರೇಲಿಯಾದ ವೇಗಿಗಳನ್ನು ಸಮರ್ಥವಾಗಿ ಎದುರಿಸಿದರು. ಈ ಕಾರಣ ಭಾರತ `ಎ' ತಂಡದವರು ಮೊದಲ ಇನಿಂಗ್ಸ್‌ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಲು ಸಾಧ್ಯವಾಯಿತು.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಆತಿಥೇಯ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಗಂಭೀರ್ ಹಾಗೂ ಜೀವನ್‌ಜೋತ್ ಸಿಂಗ್ ಮೊದಲ ವಿಕೆಟ್‌ಗೆ 67 ರನ್ ಸೇರಿಸಿದರು. ರಣಜಿ ಕ್ರಿಕೆಟ್‌ನ ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್‌ಮನ್ ಜೀವನ್‌ಜೋತ್ ತಮಗೆ ಲಭಿಸಿದ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು.ಟೆಸ್ಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಗಂಭೀರ್ ಪ್ರಥಮ ದರ್ಜೆ ಕ್ರಿಕೆಟ್‌ನ 33ನೇ ಶತಕ ಗಳಿಸಿದರು. 162 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ ಹಾಗೂ ಮೂರು ಸಿಕ್ಸರ್ ಎತ್ತಿದರು.ಆಸ್ಟ್ರೇಲಿಯಾದ ಪ್ರಮುಖ ವೇಗಿಗಳಾದ ಪೀಟರ್ ಸಿಡ್ಲ್ ಹಾಗೂ ಮಿಷೆಲ್ ಸ್ಟಾರ್ಕ್ ಅವರ ಎಸೆತಗಳನ್ನು ಗಂಭೀರ್ ಆರಂಭದಲ್ಲಿ ಎಚ್ಚರಿಕೆಯಿಂದ ಎದುರಿಸಿದರು. ಕೆಟ್ಟ ಎಸೆತಗಳನ್ನು ದಂಡಿಸಲು ಅವರು ಮರೆಯಲಿಲ್ಲ. ಆದರೆ ಸ್ಪಿನ್ನರ್‌ಗಳು ಬೌಲ್ ಮಾಡಲು ಶುರು ಮಾಡಿದ ಮೇಲೆ ದೆಹಲಿಯ ಈ ಬ್ಯಾಟ್ಸ್‌ಮನ್ ಸರಾಗವಾಗಿ ಬ್ಯಾಟ್ ಬೀಸಲಾರಂಭಿಸಿದರು. ಅವರ ಪಾದಚಲನೆ ಕೂಡ ಅದ್ಭುತವಾಗಿತ್ತು. ಪ್ರಮುಖವಾಗಿ ಆಫ್ ಸ್ಪಿನ್ನರ್ ನೇಥನ್ ಲಿಯೋನ್ ಹಾಗೂ ಎಡಗೈ ಸ್ಪಿನ್ನರ್ ಅಸ್ಟೋನ್ ಅಗರ್ ಅವರನ್ನು ಹೆಚ್ಚು ದಂಡಿಸಿದರು.ಗಂಭೀರ್ ಹಾಗೂ ರೋಹಿತ್ ಶರ್ಮ ಎರಡನೇ ವಿಕೆಟ್‌ಗೆ 128 ರನ್ ಸೇರಿಸಿದರು. ಟೆಸ್ಟ್ ತಂಡದಲ್ಲಿ ಸ್ಥಾನಕ್ಕಾಗಿ ಕಾಯುತ್ತಿರುವ ರೋಹಿತ್ (77; 144 ಎಸೆತ, 8 ಬೌಂ, 3 ಸಿ.) ತುಂಬಾ ಎಚ್ಚರಿಕೆಯಆಟಕ್ಕೆ ಮೊರೆ ಹೋದರು.ಗಂಭೀರ್ ವಿಕೆಟ್ ಪತನದ ಬಳಿಕ ಕ್ರೀಸ್‌ಗೆ ಬಂದ ಮನೋಜ್ ತಿವಾರಿ ಬಿರುಸಿನ ಆಟಕ್ಕೆ ಮುಂದಾದರು. ಕ್ರೀಸ್‌ನಲ್ಲಿ ನೆಲೆಯೂರಲು ಹೆಚ್ಚು ಸಮಯ ತೆಗೆದುಕೊಂಡರೂ ಬಳಿಕ ಆಕರ್ಷಕ ಹೊಡೆತಗಳ ಮೂಲಕ ಮಿಂಚಿದರು. ತಿವಾರಿ (ಬ್ಯಾಟಿಂಗ್ 77; 106 ಎ, 12 ಬೌಂ. 1 ಸಿ.) ಎರಡನೇ ದಿನಕ್ಕೆ ತಮ್ಮ ಬ್ಯಾಟಿಂಗ್ ಕಾಯ್ದಿರಿಸಿದ್ದು, ಶತಕದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ `ಎ' ತಂಡಕ್ಕೆ ಕೊನೆಯ ಕ್ಷಣದಲ್ಲಿ ಸ್ಥಾನ ಪಡೆದಿದ್ದ ಅಭಿಷೇಕ್ ನಾಯರ್ ಬೇಗನೇ ವಿಕೆಟ್ ಒಪ್ಪಿಸಿದರು.ತಿವಾರಿ ಈಗಾಗಲೇ ವಿಕೆಟ್ ಕೀಪರ್ ಸಿ.ಎಂ.ಗೌತಮ್ ಜೊತೆಗೂಡಿ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 66 ರನ್ ಸೇರಿಸಿದ್ದಾರೆ. ಕರ್ನಾಟಕದ ಗೌತಮ್ (ಬ್ಯಾಟಿಂಗ್ 34; 53 ಎ, 5 ಬೌಂ.) ಕೂಡ ಉತ್ತಮ ಆರಂಭ ಪಡೆದಿದ್ದಾರೆ.ಆಸ್ಟ್ರೇಲಿಯಾದ ಸ್ಪಿನ್ ತ್ರಿವಳಿಗಳಾದ ಲಿಯೋನ್, ಕ್ಸೇವಿಯರ್ ಡೊಹರ್ತಿ ಹಾಗೂ ಅಗರ್ 49 ಓವರ್ ಬೌಲ್ ಮಾಡಿದರು. ಆದರೆ 244 ರನ್ ನೀಡಿ ದುಬಾರಿ ಎನಿಸಿದರು. ಎಡಗೈ ಸ್ಪಿನ್ನರ್ ಡೊಹರ್ತಿ ಮೂರು ವಿಕೆಟ್ ಪಡೆದರು.ಸ್ಕೋರು ವಿವರ

ಭಾರತ `ಎ' 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338


ಗೌತಮ್ ಗಂಭೀರ್ ಸಿ  ವಾಟ್ಸನ್ ಬಿ ಮೊಯಿಸೆಸ್ ಹೆನ್ರಿಕ್ಸ್  112

ಜೀವನ್‌ಜೋತ್ ಸಿ ವಾಟ್ಸನ್ ಬಿ ಕ್ಸೇವಿಯರ್ ಡೊಹರ್ತಿ  24

ರೋಹಿತ್ ಶರ್ಮ ಸಿ ವೇಡ್ ಬಿ ಕ್ಸೇವಿಯರ್ ಡೊಹರ್ತಿ  77

ಮನೋಜ್ ತಿವಾರಿ ಬ್ಯಾಟಿಂಗ್  77

ಅಭಿಷೇಕ್ ನಾಯರ್ ಸಿ ಕೊವನ್ ಬಿ ಕ್ಸೇವಿಯರ್ ಡೊಹರ್ತಿ  04

ಸಿ.ಎಂ.ಗೌತಮ್ ಬ್ಯಾಟಿಂಗ್  34ಇತರೆ (ಬೈ-3, ಲೆಗ್‌ಬೈ-5, ನೋಬಾಲ್-2)  10

ವಿಕೆಟ್ ಪತನ: 1-67 (ಜೀವನ್‌ಜೋತ್; 24.3); 2-195 (ಗಂಭೀರ್; 55.1); 3-266 (ರೋಹಿತ್; 71.5); 4-272 (ನಾಯರ್; 73.4).ಬೌಲಿಂಗ್: ಮಿಷೆಲ್ ಸ್ಟಾರ್ಕ್ 16-5-36-0, ಪೀಟರ್ ಸಿಡ್ಲ್ 14-4-30-0 (ನೋಬಾಲ್-1), ಮೊಯಿಸೆಸ್ ಹೆನ್ರಿಕ್ಸ್ 11-2-20-1, ನೇಥನ್ ಲಿಯೋನ್ 20-1-97-0, ಕ್ಸೇವಿಯರ್ ಡೊಹರ್ತಿ 16-2-69-3, ಅಸ್ಟೋನ್ ಅಗರ್ 13-1-78-0

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry