ಗಜೇಂದ್ರಗಡ: ಅಭಿಮಾನಿಗಳ ಹರ್ಷ

ಮಂಗಳವಾರ, ಜೂಲೈ 23, 2019
20 °C

ಗಜೇಂದ್ರಗಡ: ಅಭಿಮಾನಿಗಳ ಹರ್ಷ

Published:
Updated:

ಗಜೇಂದ್ರಗಡ: ಜಗದೀಶ ಶೆಟ್ಟರ ಅವರ ಸಂಪುಟದಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ ಸಚಿವ ಸ್ಥಾನ ಪಡೆದಿರುವ ಹಿನ್ನಲೆಯಲ್ಲಿ ಅವರ ಹುಟ್ಟೂರು ಗಜೇಂದ್ರಗಡದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ ಹರ್ಷ ವ್ಯಕ್ತಪಡಿಸಿದರು.ಮಧ್ಯಾಹ್ನಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸೇರಿದ ಕಾರ್ಯಕರ್ತರ ಪಡೆ ಘೋಷಣೆ ಕೂಗತ್ತ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ಶೆಟ್ಟರ, ರೋಣ ಮತಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸಿದ ಶಾಸಕ ಕಳಕಪ್ಪ ಬಂಡಿ ಅವರಿಗೆ ತಡವಾದರೂ ಸಚಿವ ಸ್ಥಾನ ಸಿಕ್ಕಿದ್ದು, ಜಿಲ್ಲೆಯ ಜನರಲ್ಲಿ ತೀವ್ರ ಸಂತಸ ಉಂಟು ಮಾಡಿದೆ.ರಾಜಕೀಯ ಕ್ಷೇತ್ರದಲ್ಲಿ ರೋಣ ತಾಲೂಕು ತನ್ನದೇ ಆದಛಾಪು ಮೂಡಿಸಿದ್ದರೂ ಸಹ ಈ ವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಕೊರಗು ಕಾಡುತ್ತಲೇ ಇತ್ತು. ಆದರೆ, ಉತ್ತರ ಕರ್ನಾಟಕದ ಹೆಮ್ಮೆಯ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ರೋಣ ಕ್ಷೇತ್ರಕ್ಕೂ ಆದ್ಯತೆ ಕಲ್ಪಿಸುವ ಮೂಲಕ ಕೊರಗು ನಿವಾರಣೆ ಮಾಡಿದ್ದಾರೆ ಎಂದು ತಿಳಿಸಿದರು.ಮುತ್ತಣ್ಣ ಮ್ಯಾಗೇರಿ, ಜಗದೀಶ ಹೊಸಳ್ಳಿ, ರವಿ ಬಂಡಿ, ಅಂಬರೀಶ ಪಲ್ಲೇದ, ಮಂಜು ಮಂಥಾ, ಶೇಖಪ್ಪ ಸಕ್ರಿ, ಸುರೇಶ ಕಲಕೇರಿ, ಮಹಾಂತೇಶ ಶಿಗರಿ, ಶಿವು ಅರಳಿ, ಗಂಗಾಧರ ಪಾಟೀಲ, ಮಲ್ಲನಗೌಡ್ರ, ಚನ್ನಬಸು ಇಂಡಿ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry