ಗಜ ಕೇಸರಿ ಹೊಸ ಪ್ರಾದೇಶಿಕ ಪಕ್ಷ ಆರಂಭ

7

ಗಜ ಕೇಸರಿ ಹೊಸ ಪ್ರಾದೇಶಿಕ ಪಕ್ಷ ಆರಂಭ

Published:
Updated:

ಶಿವಮೊಗ್ಗ: ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ನೂತನ ಪ್ರಾದೇಶಕ ಪಕ್ಷ ಗಜಕೇಸರಿ ಪ್ರಾರಂಭಗೊಂಡಿದೆ ಎಂದು ಪಕ್ಷದ ಸಂಸ್ಥಾಪಕ ಎಚ್.ಎಂ. ಮಲ್ಲಕಾರ್ಜುನ್ ಹೇಳಿದರು.ಪಕ್ಷದ ನೋಂದಣಿಗೆ ಈಗಾಗಲೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಪಕ್ಷ ಅಧಿಕೃತವಾಗಿ ಜ. 15ರಿಂದ ಸ್ಥಾಪನೆಯಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಭ್ರಷ್ಟಾಚಾರ ಹಾಗೂ ಜಾತಿರಾಜಕಾರಣ ನಿರ್ಮೂಲನೆ ಮಾಡುವುದು, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯದ ಎಲ್ಲ ಜನತೆಗೆ ಮೀಸಲಾತಿ ಒದಗಿಸುವುದು, ಸ್ಪರ್ಧೆಗೆ ವಯಸ್ಸಿನ ಮಿತಿ ನಿಗದಿಪಡಿಸುವುದು ಸೇರಿದಂತೆ ದೇಶದ ಅಭಿವೃದ್ಧಿ ಮಾಡುವ ಉದ್ದೇಶದಿಂದ ಪಕ್ಷ ಸ್ಥಾಪಿಸಲಾಗಿದೆ ಎಂದರು.ಪಕ್ಷದ ಪ್ರಮುಖರಾದ ವೇಣು, ರಾಮು, ಎಸ್. ಹೊನ್ನೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry