ಗಟ್ಟಿ ಆಯುಷ್ಯದ ಹಿರಿಯಜ್ಜಿ!

7

ಗಟ್ಟಿ ಆಯುಷ್ಯದ ಹಿರಿಯಜ್ಜಿ!

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಕಡಿದಾದ ಪ್ರದೇಶದಲ್ಲಿನ ಬಂಡೆ ಉರುಳಿ ಸಂಭವಿಸಿದ ಭೂಕುಸಿತದಲ್ಲಿ ಹಿರಿಯಜ್ಜಿಯೊಬ್ಬಳು ಅದೃಷ್ಟವಶಾತ್ ಬದುಕುಳಿದ ಘಟನೆ ನ್ಯೂಯಾರ್ಕ್‌ನ ನ್ಯೂಫೇನ್‌ನಲ್ಲಿ ನಡೆದಿದೆ.86 ವರ್ಷದ ಬೆವರ‌್ಲಿ ಬ್ಲೆವೆಟ್ ಬದುಕುಳಿದ ಅದೃಷ್ಟವಂತೆ. ಕಡಿದಾದ ಪ್ರದೇಶದಲ್ಲಿರುವ ತನ್ನ ತೋಟದಲ್ಲಿ ಗಿಡದ ಎಲೆಗಳನ್ನು ಸಂಗ್ರಹಿಸುತ್ತಿದ್ದಳು. ಈ ವೇಳೆ ಬಂಡೆ ಉರುಳಿ ಬಿದ್ದು ಉಂಟಾದ ಭೂಕುಸಿತದಿಂದ ಜಾರಿ  ಕಮರಿಗೆ ಬೀಳುತ್ತಿದ್ದಾಗ 30 ಅಡಿಗಳಷ್ಟು ಆಳದಲ್ಲಿ ಮರವೊಂದನ್ನು ಹಿಡಿದುಕೊಂಡು ಜೋರಾಗಿ ಕಿರುಚಿದ್ದಾಳೆ. ಇದನ್ನು ಕೇಳಿದ ನೆರೆಯ ಹೊರೆಯ ಜನ ಕೂಡಲೇ ತುರ್ತು ರಕ್ಷಣಾ ಪಡೆಗೆ ಮಾಹಿತಿ ತಲುಪಿಸಿದರು.ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಹಗ್ಗದ ಸಹಾಯದಿಂದ ವೃದ್ಧೆಯನ್ನು ಮೇಲಕ್ಕೆತ್ತಿದ್ದಾರೆ. ಮೈ ತರಚಿದ್ದು ಹೊರತುಪಡಿಸಿದರೆ ಬೆವರ‌್ಲಿಗೆ ಹೇಳಿಕೊಳ್ಳುವಂತಹ ಗಾಯವಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಮರಿ ಸುಮಾರು 100 ಅಡಿಗಳಷ್ಟು ಆಳವಾಗಿದೆ. ಕಮರಿಗೆ ಬೀಳುವ ಸಂದರ್ಭದಲ್ಲಿ ಬೆವರ‌್ಲಿ ಮರದ ಕಾಂಡವನ್ನು ಹಿಡಿದುಕೊಳ್ಳದಿದ್ದಲ್ಲಿ ಆಕೆ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಇತ್ತೆನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry