ಭಾನುವಾರ, ಏಪ್ರಿಲ್ 11, 2021
22 °C

ಗಡಾಫಿ ಅಧಿಕಾರ ಅಭಾದಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡಾಫಿ ಅಧಿಕಾರ ಅಭಾದಿತ

ಟ್ರಿಪೋಲಿ (ಪಿಟಿಐ): ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರನ್ನು ಪದಚ್ಯುತಗೊಳಿಸಲು ನಡೆಯುತ್ತಿರುವ ಚಳವಳಿ ಮತ್ತು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹಲವು ರಾಷ್ಟ್ರಗಳು ಗಡಾಫಿ ಪಡೆಗಳ ಮೇಲೆ ಮಾಡುತ್ತಿರುವ ದಾಳಿಯಿಂದ ತತ್ತರಿಸಿರುವ ಅಲ್ಲಿನ ಸರ್ಕಾರ ರಾಜಕೀಯವಾಗಿ ಸುಧಾರಣೆಗಳನ್ನು ತರಲು ಸಿದ್ಧವಿರುವುದಾಗಿ ಹೇಳಿದೆ. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳು ಮಾಡುತ್ತಿರುವ ಗಡಾಫಿ ಅವರ ಪದತ್ಯಾಗದ ಒತ್ತಾಯವನ್ನು ತಿರಸ್ಕರಿಸಿದೆ.

ಸೋಮಾಲಿಯಾ ಮತ್ತು ಇರಾಕ್‌ನಲ್ಲಿ ಆದಂತೆ ನಮ್ಮಲ್ಲಿ ಅರಾಜಕತೆ ಉಂಟಾಗಲು ಬಿಡುವುದಿಲ್ಲ. ಗಡಾಫಿ ಅಧಿಕಾರ ತ್ಯಜಿಸುವ ಮಾತೇ ಇಲ್ಲ ಎಂದೂ ಹೇಳಿದೆ.

ಗಡಾಫಿ ಅವರ ವಕ್ತಾರ ಮುಸ್ಸಾ ಇಬ್ರಾಹಿಂ, ‘ರಾಷ್ಟ್ರದಲ್ಲಿ ರಾಜಕೀಯ ಸುಧಾರಣೆಗಳಿಗಾಗಿ ಸರ್ಕಾರ ಮಾತುಕತೆ ನಡೆಸಲು ಸಿದ್ಧವಿದೆ. ದೇಶದ ಏಕತೆಯ ದೃಷ್ಟಿಯಿಂದ ಗಡಾಫಿ ಅವರ ನಾಯಕತ್ವ ಅನಿವಾರ್ಯ. ಹಾಗಾಗಿ  ಅವರು ಅಧಿಕಾರದಿಂದ ಕೆಳಗಿಳಿಯುವುದಿಲ್ಲ ಎಂದು ಸುದ್ದಿಗಾರರಿಗೆ  ತಿಳಿಸಿದ್ದಾರೆ.

‘ನಾವು ಹೋರಾಡುತ್ತಿರುವುದು ಸಶಸ್ತ್ರವಾಗಿ ಗಡಾಫಿ ವಿರುದ್ಧ ಬಂಡೆದ್ದಿರುವವರ ವಿರುದ್ಧವೇ ಹೊರತು ಸಾಮಾನ್ಯ ನಾಗರಿಕರ ಮೇಲೆ ಅಲ್ಲ’ ಎಂದಿದ್ದಾರೆ.

ಗಡಾಫಿ ವಿರೋಧಿ ಪಡೆಗಳು ತೈಲ ನಿಕ್ಷೇಪ ಪಟ್ಟಣವಾದ ಬ್ರೆಗಾವನ್ನು ವಶ ಪಡಿಸಿಕೊಳ್ಳಲು ಮರು ಪ್ರಯತ್ನ ಮಾಡುತ್ತಿದ್ದು ಮತ್ತು ಅಮೆರಿಕವು ತನ್ನ ಯುದ್ಧ ವಿಮಾನಗಳನ್ನು ಹಿಂದಕ್ಕೆ ಕರೆಸಿಕೊಂಡಿರುವ ಬೆನ್ನಲ್ಲೇ ಗಡಾಫಿ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.