ಗಡಾಫಿ ಹತ್ಯೆಗೆ ಸರ್ಕೊಜಿ ಆದೇಶ?

7

ಗಡಾಫಿ ಹತ್ಯೆಗೆ ಸರ್ಕೊಜಿ ಆದೇಶ?

Published:
Updated:

ಲಂಡನ್ (ಐಎಎನ್‌ಎಸ್): ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೊಲಸ್ ಸರ್ಕೊಜಿ ಅವರ ಆದೇಶದ ಮೇರೆಗೆ ಫ್ರಾನ್ಸ್‌ನ ಗುಪ್ತ ದಳದ ಸಿಬ್ಬಂದಿ ಲಿಬಿಯಾದ ಮುಖಂಡ ಮುಮ್ಮರ್ ಗಡಾಫಿಯನ್ನು ಹತ್ಯೆ ಮಾಡಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.ಫ್ರಾನ್ಸ್‌ನ ಗುಪ್ತದಳದ ಸಿಬ್ಬಂದಿ ಲಿಬಿಯಾದಲ್ಲಿ ಗಲಭೆ ನಡೆಯುತ್ತಿದ್ದಾಗ ಗಲಭೆಕೋರರ ಗುಂಪಿನಲ್ಲಿ ನುಸುಳಿ ಗಡಾಫಿಯ ಹಣೆಗೆ ಗುಂಡು ಹೊಡೆದು ಸಾಯಿಸಿದ್ದಾರೆ.ಗಡಾಫಿ ಜತೆ ರಹಸ್ಯ ಸಂಬಂಧ ಹೊಂದಿದ್ದ ವಿಚಾರ ಬಹಿರಂಗವಾಗಬಾರದು ಎಂಬ ಉದ್ದೇಶದಿಂದ ಸರ್ಕೊಜಿ ಈ ಹತ್ಯೆಗೆ ಆದೇಶಿಸಿದ್ದರು ಎಂದು ಪತ್ರಿಕೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry