ಗುರುವಾರ , ನವೆಂಬರ್ 21, 2019
26 °C

ಗಡಿಭದ್ರತಾ ಪಡೆ ಪಥ ಸಂಚಲನ; ಜಾಗೃತಿ

Published:
Updated:

ನರಸಿಂಹರಾಜಪುರ: ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆತಂಕವಿಲ್ಲದೆ ನಿರ್ಭೀತಿ ಯಿಂದ ಮತದಾನದಲ್ಲಿ ಭಾಗವಹಿ ಸುವಂತೆ ಆತ್ಮವಿಶ್ವಾಸ ತುಂಬಲು ಗಡಿಭದ್ರತಾ ಪಡೆಯ ಸಿಬ್ಬಂದಿ ಶನಿವಾರ ಪಟ್ಟಣದಲ್ಲಿ ಪಥಸಂಚಲನ ನಡೆಸಿದರು.ಕೊಪ್ಪದಿಂದ ಇಲ್ಲಿಗೆ ಆಗಮಿಸಿ ಬಿಎಸ್‌ಎಫ್ ಯೋಧರು ಹಾಗೂ ಪೊಲೀಸರೊಂದಿಗೆ ಸ್ಥಳೀಯ ಬ್ಯಾಂಡ್‌ಸೆಟ್ ಕಲಾವಿದರಾದ ಹಳೇಪೇಟೆ ನಾಗರಾಜ್  ತಂಡದೊಂದಿಗೆ ಬಸ್ತಿಮಠ ದಿಂದ ಪಟ್ಟಣದ ಪ್ರವಾಸಿ ಮಂದಿರ ವರೆಗೆ ಹಾಗೂ ಹಳೇಪೇಟೆವರೆಗೆ ಮೆರವಣಿಗೆ ನಡೆಸಿದರು.ಬಿಎಸ್‌ಎಫ್ ಯೋಧರು ಸಮವಸ್ತ್ರ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ಶಿಸ್ತಿನಿಂದ ಮೆರವಣಿಗೆಯಲ್ಲಿ ಸಾಗಿದ್ದನ್ನು ರಸ್ತೆಯ ಇಕ್ಕೇಲೆಗಳಲ್ಲಿ ನಿಂತು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿದ್ದ ಯೋಧರ ಬಗ್ಗೆ  ಮಾಹಿತಿ ನೀಡಿದ ಕೊಪ್ಪ ಡಿವೈಎಸ್‌ಪಿ ಡಾ.ಜಗದೀಶ್, ಕೊಯ ಮುತ್ತೂ ರಿನಿಂದ 100 ಜನರ ತುಕುಡಿಯನ್ನು ಎನ್.ಆರ್.ಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಚುನಾ ವಣಾ ಕಾರ್ಯಕ್ಕೆ ನಿಯೋ ಜಿಸಲಾಗಿದೆ. ಇವರು ತಾಲ್ಲೂಕಿನ ವ್ಯಾಪ್ತಿಯ ಎಲ್ಲಾ ಹಳ್ಳಿಗಳು ಹಾಗೂ ಮತಗಟ್ಟೆಗಳಿಗೂ ಭೇಟಿ ನೀಡಿ ಮತದಾರರಲ್ಲಿ ಮತದಾನಕ್ಕೆ ಆತ್ಮ ವಿಶ್ವಾಸ ತುಂಬಲಿದ್ದಾರೆ. 18ರಿಂದ ಚುನಾವಣೆ ಮುಗಿಯುವವರೆಗೆ ಇವರು ಇಲ್ಲಿಯೇ ನೆಲೆಸಲಿದ್ದಾರೆ ಎಂದರು.ಪೊಲೀಸ್    ಇನ್ಸ್‌ಪೆಕ್ಟರ್ ಜಿ.ಕೃಷ್ಣ ಮೂರ್ತಿ, ಪೊಲೀಸ್‌ಸಬ್ ಇನ್ಸ್‌ಪೆಕ್ಟರ್ ತಿಮ್ಮ ರಾಜು ಹಾಗೂ ಬಿಎಸ್‌ಎಫ್ ಅಧಿ ಕಾರಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)