ಶನಿವಾರ, ಏಪ್ರಿಲ್ 10, 2021
32 °C

ಗಡಿಭಾಗದಲ್ಲಿ ಕ್ರೀಡೆ ಬೆಳೆಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್: ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಲಭಿಸುತ್ತದೆ. ಗಡಿ ಭಾಗದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಕ್ರೀಡಾ ಮನೋಭಾವ ಬೆಳೆಸುವಲ್ಲಿ ಮುಂದಾಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಾಯಿಬಣ್ಣ ಬೊರಬಂಡಾ ತಿಳಿಸಿದರು.ಅವರು ಶನಿವಾರ ಪಟ್ಟಣದ ಗಾಂಧಿ ಮೈದಾನದ ಆವರಣದಲ್ಲಿ ಎಂ.ವಿಶ್ವೇಶ್ವರಯ್ಯ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.ಖಾಸಾಮಠದ ಪೂಜ್ಯ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿ ಸಾನ್ನಿಧ್ಯ ವಹಿಸಿ ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಮಾನವೀಯತೆಯನ್ನು ಮರೆತು ಬದುಕುತ್ತಿದ್ದಾರೆ. ಕ್ರೀಡೆಗಳು ಉತ್ತಮ ಬಾಂಧವ್ಯ ವೃದ್ಧಿಸುವುದರ ಜೊತೆಗೆ ನಾಯಕತ್ವದ ಗುಣ ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.ಗುಲ್ಬರ್ಗ, ಬಿಜಾಪುರ, ಶಹಾಪುರ, ಚಿತ್ತಾಪುರ, ಗಾಜರಕೋಟ, ಆಂಧ್ರ ಪ್ರದೇಶದ ಮದ್ದೂರ್, ಭೀಮನಹಳ್ಳಿ ಸೇರಿದಂತೆ ಪಟ್ಟಣದ ಮೂರು ತಂಡಗಳು ಸೇರಿದಂತೆ ಕ್ರೀಡೆಯಲ್ಲಿ ಆಸಕ್ತ 20 ತಂಡಗಳು ಭಾಗವಹಿಸಿವೆ.

ಬಸವರಾಜ ಬೂದಿ ಅಧ್ಯಕ್ಷತೆ ವಹಿಸಿದ್ದರು. ಸಿ.ಪಿ.ಐ ಪಿ.ಕೆ. ಚೌದರಿ, ಭೀಮರೆಡ್ಡಿ ಉಟ್ಕೂರ್, ರಘುನಾಥರೆಡ್ಡಿ ನಜರಾಪೂರ, ಮಲ್ಲಿಕಾರ್ಜುನ ಹೊಸಮಾನಿ, ಶರಣಪ್ಪ ಪಾಟೀಲ್, ಖಾಜಾಮೈನೋದ್ದೀನ, ಚಾಂದಪಾಶ, ಜರ್ನಾಧನ ಬುಡ್ಡಪ್ಪ, ಜಿ.ಕಿಶನ್ ಮತ್ತಿತರರು ಇದ್ದರು.  ಶಿವರಾಜ ಸಾಕಾ ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ್ ರಾಥೋಡ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.