ಮಂಗಳವಾರ, ಜನವರಿ 28, 2020
29 °C

ಗಡಿಯಲ್ಲಿ ಪಾಕ್ ವ್ಯಕ್ತಿ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು (ಐಎಎನ್‌ಎಸ್): ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ವಲಯದಿಂದ ಗುರುವಾರ ಬೆಳಿಗ್ಗೆ ಅಕ್ರಮವಾಗಿ ಒಳನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.ಮಾಲಾ ಬಾಲಾ ಬಳಿ ಈತ ಗಡಿ ರೇಖೆ ಮೂಲಕ ಭಾರತೀಯ ಭೂಪ್ರದೇಶ ದಾಟುತ್ತಿದ್ದ. ಕೂಡಲೇ ಅಧಿಕಾರಿಗಳು ಈತನನ್ನು ಪ್ರಶ್ನಿಸಿದರೂ ಅದಕ್ಕೆ ಸೊಪ್ಪು ಹಾಕದೇ ಮುಂದೆ ಹೋಗಲು ಯತ್ನಿಸಿದಾಗ ಅವನಿಗೆ ಗುಂಡಿಕ್ಕಲಾಯಿತು ಎಂದು ಗಡಿ ಭದ್ರತಾ ಪಡೆ ಅಧಿಕಾರಿ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)