ಶನಿವಾರ, ನವೆಂಬರ್ 23, 2019
23 °C

ಗಡಿಯಲ್ಲಿ ಯಥಾಸ್ಥಿತಿಗೆ ಸಲಹೆ

Published:
Updated:

ನವದೆಹಲಿ (ಪಿಟಿಐ): ಲಡಾಕ್‌ನ ದೌಲತ್ ಬೇಗ್ ಒಲ್ಡಿ (ಡಿಬಿಒ)ಸೆಕ್ಟರ್‌ನಲ್ಲಿ ಈ ಹಿಂದೆ ಇದ್ದ ನಿಯಮವನ್ನೇ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಭಾರತ, ಚೀನಾವನ್ನು ಕೇಳಿದೆ.ಚೀನಾದ ಸೈನಿಕರು 8 ದಿನಗಳ ಹಿಂದೆ ಭಾರತ ಗಡಿಯನ್ನು ದಾಟಿ 10 ಕಿ.ಮೀ ಒಳಗಿನ ಪ್ರದೇಶವನ್ನು ಅತಿಕ್ರಮಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಲ್ಲಿ ನಡೆದ ಉಭಯ ದೇಶಗಳ ಸೇನಾಧಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಭಾರತ ಪ್ರಸ್ತಾಪಿಸಿದೆ. ಲಡಾಕ್‌ನ ಪಶ್ಚಿಮ ಗಡಿ ಭಾಗದಲ್ಲಿರುವ ಡಿಒಬಿ ಸೆಕ್ಟರ್‌ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಚೀನಾವನ್ನು ಕೇಳಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.`ವಾಸ್ತವಿಕ ಗಡಿ ನಿಯಂತ್ರಣ ರೇಖೆ ಕುರಿತು ಉಭಯ ರಾಷ್ಟ್ರಗಳ ಗಡಿಭಾಗದ ಸೇನಾಧಿಕಾರಿಗಳಲ್ಲಿ ಭಿನ್ನಾಭಿಪ್ರಾಯಗಳಿದ್ದು, ಚೀನಾ ಸೇನೆ ಗಡಿಯೊಳಗೆ ಅತಿಕ್ರಮಿಸಿರುವುದರಿಂದ ಎರಡೂ ರಾಷ್ಟ್ರಗಳ ಸೇನೆಗಳು ಮುಖಾ-ಮುಖಿಯಾಗಿವೆ. ಈ ಉದ್ವಿಗ್ನ ಸ್ಥಿತಿ ತಪ್ಪಿಸಲು ಚೀನಾ ಯಥಾ ಸ್ಥಿತಿ ಕಾಪಾಡಿಕೊಳ್ಳಲು ಸಲಹೆ ನೀಡಿದೆ.ಗಡಿ ಅತಿಕ್ರಮಣ-ಚೀನಾ ನಕಾರ:

ಬೀಜಿಂಗ್(ಪಿಟಿಐ
):ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಲಡಾಖ್ ಮೂಲಕ ಭಾರತದ ಗಡಿಯನ್ನು ಅತಿಕ್ರಮಿಸಿದೆ ಎಂಬ ಆರೋಪವನ್ನು ಚೀನಾ  ಮಂಗಳವಾರ ಬಲವಾಗಿ ತಳ್ಳಿ ಹಾಕಿದೆ.

ಪ್ರತಿಕ್ರಿಯಿಸಿ (+)