ಗಡಿಯೊಳಗೆ ಡ್ರೋಣ್ ದಾಳಿಗೆ ಅನುಮತಿ ನೀಡಿಲ್ಲ - ಯೂಸುಫ್ ರಜಾ ಗಿಲಾನಿ

7

ಗಡಿಯೊಳಗೆ ಡ್ರೋಣ್ ದಾಳಿಗೆ ಅನುಮತಿ ನೀಡಿಲ್ಲ - ಯೂಸುಫ್ ರಜಾ ಗಿಲಾನಿ

Published:
Updated:

ಪರ್ತ್ (ಐಎಎನ್‌ಎಸ್):  ಪಾಕಿಸ್ತಾನದ ಗಡಿಯೊಳಗೆ ಡ್ರೋಣ್ ದಾಳಿ ನಡೆಸಲು ಅಮೆರಿಕಕ್ಕೆ ಅನುಮತಿ ನೀಡಿಲ್ಲ ಎಂದು ಪ್ರಧಾನಿ ಯೂಸುಫ್ ರಜಾ ಗಿಲಾನಿ ಸ್ಪಷ್ಟಪಡಿಸಿದ್ದಾರೆ.ಪಾಕಿಸ್ತಾನದ ಕೆಲವು ತಜ್ಞರನ್ನು ಉದ್ದೇಶಿಸಿ ಮಾತನಾಡುವಾಗ ಗಿಲಾನಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಪಾಕಿಸ್ತಾನದ ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ.ಡ್ರೋಣ್ ದಾಳಿಯಿಂದ ಬರೀ ಉಗ್ರಗಾಮಿಗಳು ಸತ್ತಿಲ್ಲ. ಬದಲಿಗೆ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ಇದಲ್ಲದೆ ಭಯೋತ್ಪಾದಕರ ವಿರುದ್ಧ ಜನಾಭಿಪ್ರಾಯ ಮೂಡಿಸುವ ಪಾಕಿಸ್ತಾನ ಸರ್ಕಾರದ ಯತ್ನಕ್ಕೆ ಅಡ್ಡಿಯುಂಟಾಗಿದೆ.ಪಾಕಿಸ್ತಾನ ಮತ್ತು ಅಮೆರಿಕದ ನಡುವಿನ ಸಂಬಂಧ ಹಳಸಲು ಡ್ರೋಣ್ ದಾಳಿಯೂ ಒಂದು ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.`ಮೊದಲೆಲ್ಲ ಅಮೆರಿಕದಿಂದ ಒಂದು ದೂರವಾಣಿ ಕರೆ ಬಂದರೆ ಸಾಕಾಗಿತ್ತು. ಅವರು ಹೇಳಿದ್ದನ್ನು ಮಾಡಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಸಂಸತ್ತಿನ ಒಪ್ಪಿಗೆಯ ನಂತರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ನಮ್ಮ ದೇಶದ ವಿದೇಶಾಂಗ ನೀತಿಯಲ್ಲಿ ಭಾರಿ ಬದಲಾವಣೆ ಆಗಿದೆ~ ಎಂದು ಗಿಲಾನಿ ಹೇಳಿದ್ದಾರೆ.2011ರಲ್ಲಿ 60 ಡ್ರೋಣ್ ದಾಳಿಗಳು ನಡೆದು 460ಕ್ಕೂ ಹೆಚ್ಚು ಜನರು ಸತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.6 ಸಾವು: ಗಿಲಾನಿ ಅವರ ಈ ಹೇಳಿಕೆಯ ಬೆನ್ನಲ್ಲೇ, ಉತ್ತರ ವಜಿರಿಸ್ತಾನದ ಮನೆಯೊಂದರ ಮೇಲೆ ಅಮೆರಿಕದ ನಡೆಸಿರುವ ಡ್ರೋಣ್ ದಾಳಿಯಲ್ಲಿ  6 ಶಂಕಿತ ಉಗ್ರರು ಸಾವಿಗೀಡಾಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry