ಗಡಿರಸ್ತೆ ವಿವಾದ: ಇತ್ಯರ್ಥಕ್ಕೆ ಪ್ರಯತ್ನ

ಬುಧವಾರ, ಜೂಲೈ 17, 2019
25 °C

ಗಡಿರಸ್ತೆ ವಿವಾದ: ಇತ್ಯರ್ಥಕ್ಕೆ ಪ್ರಯತ್ನ

Published:
Updated:

ಆಳಂದ: ತಾಲ್ಲೂಕಿನ ಗಡಿಗ್ರಾಮ ಹೊದಲೂರ ಮತ್ತು ಮಹಾರಾಷ್ಟ್ರದ ಬ್ಯಾಡಗಿ ನಡುವಿನ ಗಡಿ ಮಾರ್ಗ ಮಧ್ಯೆ ಉಭಯತ್ರಯ ರೈತರ ಜಮೀನಿಗೆ ಹೊಂದಿಕೊಂಡಂತೆ ಇರುವ ವಹಿವಾಟು ರಸ್ತೆ ಕುರಿತು ಉಂಟಾದ ಗಡಿ ರಸ್ತೆ ವಿವಾದ  ಸ್ಥಳಕ್ಕೆ ಗುರುವಾರ ತಹಸೀಲ್ದಾರ ಡಾ.ನಾಗೇಂದ್ರ ಹೊನ್ನಳ್ಳಿ ಭೇಟಿ ನೀಡಿ ಪರಿಶೀಲಿಸಿದರು.ಪಕ್ಕದ ಮಹಾರಾಷ್ಟ್ರದ ರೈತರೊಂದಿಗೆ ಉಂಟಾದ ಸಣ್ಣ ವ್ಯಾಜ್ಯದ ಬಗ್ಗೆ ಹೊದಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಹಾಗೂ ರೈತರು  ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದರು.

ಈ ದೂರಿನ ಅನ್ವಯ ತಹಸೀಲ್ದಾರ ನೇತೃತ್ವದಲ್ಲಿ ಸಿಪಿಐ ಶರಣಬಸವೇಶ್ವರ, ನೋಂದಣಿ ಇಲಾಖೆ ಹಾಗೂ ಕಂದಾಯ ಇಲಾಖೆ  ಸಿಬ್ಬಂದಿ  ಸಮಸ್ಯೆಯ ಬಗ್ಗೆ ಎರಡು ಕಡೆಯವರ ವಾದವಿವಾದಗಳನ್ನು ಆಲಿಸಿ ನೆರೆಯ ಉಮರ್ಗಾ ತಹಸೀಲ್ದಾರರೊಂದಿಗೆ ಮತ್ತು ಪೊಲೀಸ್ ಇಲಾಖಾ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ದೂರವಾಣಿಯ ಮೂಲಕ ಸಂಪರ್ಕಿಸಿ ಸದರಿ ವ್ಯಾಜ್ಯವನ್ನು ಶಾಂತಿಯುತವಾಗಿ ಬಗೆ ಹರಿಸಲು ಪ್ರಯತ್ನಿಸಿದರು.ಮಹಾರಾಷ್ಟ್ರ ಭಾಗದ ರೈತರು ಗಡಿ ಪಕ್ಕದ ಬದುಗಳನ್ನು ನಿರ್ಮಿಸುತ್ತಿರುವುದರಿಂದಲೇ ಕರ್ನಾಟಕದ ರೈತರ ಹೊಲಗಳಿಗೆ ಆತಂಕಕಾರಿಯಾಗುತ್ತಿದೆ ಎಂದು ನಮ್ಮ ಗಡಿಭಾಗದ ರೈತ  ಶಿವಲಿಂಗಪ್ಪ ಬಿಲುಗುಂದೆ, ರಾಜಶೇಖರ ಪಾಟೀಲ, ಗುರುನಾಥ ವಾಗ್ದರೆ ದೂರಿದ್ದರು.ಸರ್ವೆ ಇಲಾಖೆ ಅಧಿಕಾರಿ ದಿಗಂಬರ ಪೊದ್ದಾರ, ಕಂದಾಯ ನಿರೀಕ್ಷಕರ ಅಬ್ದುಲ್ ವಾಹಬ, ವೀರಯ್ಯ ಸ್ವಾಮಿ, ಬಸವರಾಜ ಮುಲಗೆ, ರೈತ ಮುಖಂಡರಾದ ಗುರುನಾಥ ಅಡತೆ, ಚಿದಂಬರ ಬಿರಾದಾರ, ರಾಜೇಂದ್ರ ಬನಶೆಟ್ಟಿ, ಬನಸಿಲಾಲ ಬಿರಾದಾರ, ರಾಮಾನಂದ ಕಾಮಶೆಟ್ಟಿ, ಚಂದರ ಪಟೇಲ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry