ಗಡಿವಿವಾದ: ಮಹಾರಾಷ್ಟ್ರದ ಅರ್ಜಿ.20ಕ್ಕೆ ವಿಚಾರಣೆ ಸಾಧ್ಯತೆ

ತುಮಕೂರು: ಗಡಿವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜ.20 ರಂದು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ಗಡಿ ಉಸ್ತುವಾರಿ ವಹಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
44 ವರ್ಷಗಳ ಹಿಂದೆ ಮುಗಿದ ಗಡಿವಿವಾದವನ್ನು ಮಹಾರಾಷ್ಟ್ರ ಸರ್ಕಾರ ರಾಜಕೀಯ ಉದ್ದೇಶಗಳಿಗಾಗಿ ಕೆದಕಿದೆ. ಮಹಾಜನ್ ವರದಿಯನ್ನು ಜಾರಿಗೆ ತರಬೇಕು. ಇಲ್ಲವೇ ಯಥಾಸ್ಥಿತಿ ಕಾಯ್ದುಕೊಳ್ಳಲಿ ಎಂಬುದು ನಮ್ಮ ವಾದ. ರಾಜ್ಯದ ಪರ ಕಪಿಲ್ಸಿಬಲ್ ಹಾಗೂ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಸಮರ್ಥ ವಾದ ಮಂಡಿಸಲಿದ್ದಾರೆ ಎಂದರು.
ಗಡಿ ಬದಲಾವಣೆ, ಹಳ್ಳಿಗಳ ಪುನರ್ವಿಂಗಡಣೆಯಂಥ ವಿಚಾರಗಳು ಸಂಸತ್ ವ್ಯಾಪ್ತಿಗೆ ಬರುವ ಜವಾಬ್ದಾರಿ. ಬೇರೆ ಯಾರ ಹಸ್ತಕ್ಷೇಪಕ್ಕೂ ಇಲ್ಲಿ ಅವಕಾಶವಿಲ್ಲ ಎಂಬುದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.