ಗಡಿ ಗ್ರಾಮಗಳಲ್ಲಿ ಶಿಕ್ಷಣ ಕ್ರಾಂತಿ- ಸಾಯಿಬಣ್ಣ

7

ಗಡಿ ಗ್ರಾಮಗಳಲ್ಲಿ ಶಿಕ್ಷಣ ಕ್ರಾಂತಿ- ಸಾಯಿಬಣ್ಣ

Published:
Updated:

ಗುರುಮಠಕಲ್: ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಈ ಭಾಗದಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದ್ದು ಕನ್ನಡದ ಅಭಾವ ಕಾಣುತ್ತಿರುವಾಗ, ಈ ಭಾಗದ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ತಮ್ಮ ಸಾಧನೆಯನ್ನು ಪ್ರದ ರ್ಶನ ಮಾಡುತ್ತಿರುವುದು ಸಂತಸದ ಸಂಗತಿ. ಅದಕ್ಕೆ ಕಾರಣ ಸ್ವಾಮೀಜಿಯ ವರು ಶಿಕ್ಷಣ ಪ್ರೇಮಿಗಳಾಗಿರುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಬಣ್ಣ ಬೋರಬಂಡ ಅಭಿಪ್ರಾಯ ಪಟ್ಟರು.ಮಂಗಳವಾರ ಖಾಸಾಮಠದ ಶಾಲೆಯಿಂದ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು. ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾ ಹಿಸುವ ಪ್ರಾಮಾಣಿಕ ಕಾರ್ಯ ಶಿಕ್ಷಕರು ನಿರ್ವಹಿಸಬೇಕು  ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಾಗರತ್ನ ಆರ್. ಕುಪ್ಪಿ ಹೇಳಿದರು.ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ವಿವಿಧ ಹಾಡು ಹಾಗೂ ನಾಟಕಗಳ ಪ್ರದರ್ಶನ ಮಾಡುವುದರೊಂದಿಗೆ ಸಾರ್ವಜನಿಕ ರನ್ನು ರಂಜಿಸಿದರು. ಇದೇ ಸಂದರ್ಭ ದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗ ದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಖಾಸಾಮಠದ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಜಿಲ್ಲಾ ಪಂಚಾ ಯಿತಿ ಅಧ್ಯಕ್ಷೆ ಅನುಸೂಯ ಬೋರ ಬಂಡ, ಪಿಎಸ್‌ಐ ಎಂ.ಎಸ್. ಯಾಳಗಿ, ಪರ್ವತರೆಡ್ಡಿ ಪಾಟೀಲ, ಪ್ರೇಮರಾಜ್ ತೇಜರಾಜ್ ಧೋಕಾ, ಮಲ್ಲಿಕಾರ್ಜುನ ಹಿರೇಮಠ, ನರಸರೆಡ್ಡಿ ಗಡೆಸೂಗುರ್, ಸುನಿತಾ ಚವ್ಹಾಣ್, ರೇವಣಸಿದ್ದಪ್ಪ, ಅಶೋಕ್ ಮುತ್ತಗಿ, ವೀರಣ್ಣ ಬೇಲಿ ವೇದಿಕೆಯಲ್ಲಿದ್ದರು. ಶಿಕ್ಷಕಿ ಲಕ್ಷ್ಮೀ ಶಾಲಾ ವಾರ್ಷಿಕ ವರದಿವಾಚನ ಮಾಡಿದರು, ನಾಗರಾಜ ಸ್ವಾಗತಿಸಿದರು, ಮುಖ್ಯಗುರು ಲಾಲಪ್ಪ ನಿರೂಪಿಸಿದರು. ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಾಲಕರು ಸಾರ್ವಜನಿಕರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry