ಗಡಿ ದಾಟಿದ ಪ್ರಿಯಾಂಕಾ

7

ಗಡಿ ದಾಟಿದ ಪ್ರಿಯಾಂಕಾ

Published:
Updated:
ಗಡಿ ದಾಟಿದ ಪ್ರಿಯಾಂಕಾ

ಸುಲ್ತಾನ್‌ಪುರ (ಪಿಟಿಐ): ಇದುವರೆಗೂ ರಾಯ್‌ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ಮಾತ್ರ ತಮ್ಮ ಸಹೋದರ ಹಾಗೂ ತಾಯಿಯ ಪರ ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ವಾದ್ರಾ, ಇದೀಗ ಮತದಾರರ ವಿಶ್ವಾಸ ಗಳಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಹೊರಭಾಗದಲ್ಲೂ ಭಾನುವಾರ ರೋಡ್‌ಶೋ ನಡೆಸಿದರು.ಲಂಬುವಾದಿಂದ ಆರಂಭವಾದ ರೋಡ್‌ಶೋನಲ್ಲಿ ಸಹೋದರ ರಾಹುಲ್ ಗಾಂಧಿ ಅವರ ಜೊತೆ ಪ್ರಿಯಾಂಕಾ ಪಾಲ್ಗೊಂಡಿದ್ದರು. ಉತ್ತರ ಪ್ರದೇಶದ ಭವಿಷ್ಯವನ್ನೇ ಬದಲಾಯಿಸಲು ತಾವು ಹೋರಾಡುತ್ತಿದ್ದು, ಕಾಂಗ್ರೆಸ್‌ಗೆ ಕೇವಲ ಐದು ವರ್ಷಗಳ ಕಾಲಾವಧಿ ಕೊಡಿ ಎಂದು ರಾಹುಲ್  ಇದೇ ವೇಳೆ ಜನರನ್ನು ಕೋರಿದರು. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸಿಕೊಡುವ ಮೂಲಕ ಬಡತನ ತೊಲಗಿಸುವುದೇ ಮುಖ್ಯ ಧೋರಣೆ ಎಂದೂ ರಾಹುಲ್ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry