ಗಡಿ ಬೇಲಿ: ಬಹುಕೋಟಿ ಹಗರಣ

7

ಗಡಿ ಬೇಲಿ: ಬಹುಕೋಟಿ ಹಗರಣ

Published:
Updated:

ಐಜ್ವಾಲ್ (ಪಿಟಿಐ):  ದಕ್ಷಿಣ  ಮಿಜೋರಾಮ್‌ನ ಚಕ್ಮ ಸ್ವಾಯತ್ತ ಜಿಲ್ಲಾ ಮಂಡಳಿ ವ್ಯಾಪ್ತಿಯಲ್ಲಿ (ಸಿಎಡಿಸಿ) ಭಾರತ ಬಾಂಗ್ಲಾದೇಶ ಗಡಿ ಬೇಲಿ ನಿರ್ಮಾಣದಲ್ಲಿ ಬಹು ಕೋಟಿ ರೂಪಾಯಿಗಳ ದುರುಪಯೋಗದ ಆರೋ   ಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಾಂಗ್ರೆಸ್ ಮುಖಂಡರು, ಸಿಎಡಿಸಿ ಅಧಿಕಾರಿಗಳು ಮತ್ತು 318 ಕಿ.ಮೀ. ಉದ್ದದ ಅಂತರರಾಷ್ಟ್ರೀಯ ಗಡಿಗೆ ಬೇಲಿ ಹಾಕುವ ಗುತ್ತಿಗೆದಾರರಲ್ಲಿ ಒಬ್ಬರಾದ ರಾಷ್ಟ್ರೀಯ ಯೋಜನಾ ನಿರ್ಮಾಣ ಸಂಸ್ಥೆ ಹಣ ದುರುಪಯೋಗ ಮಾಡಿದ್ದಾರೆ ಎಂದು     ಸಿಎಡಿಸಿ ಬಿಜೆಪಿ ಅಧ್ಯಕ್ಷರಾದ ಲಕ್ಷ್ಮಿ   ಬಿಕಾಶ್ ಚಕ್ಮ ಅವರು ಆರೋಪಿಸಿರುವ ಹಿನ್ನೆಲೆಯಲ್ಲಿ ಈ    ತನಿಖೆ ಕೈಗೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry