ಮಂಗಳವಾರ, ಮೇ 11, 2021
27 °C

ಗಡಿ ಸಮಾವೇಶಕ್ಕೆ ಎಂಇಎಸ್ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತಾಲ್ಲೂಕು ಹಾಗೂ ಶಹರ ಘಟಕದ ಸಂಯುಕ್ತ ಆಶ್ರಯದಲ್ಲಿ ಮೇ 20 ರಂದು ಯಳ್ಳೂರು ಗ್ರಾಮದ ಮಹಾರಾಷ್ಟ್ರ ಮೈದಾನದಲ್ಲಿ ಗಡಿ ಸಮಾವೇಶ (ಭವ್ಯ ಸೀಮಾ ಮೇಳಾವ್) ಆಯೋಜಿಸಲು ಇತ್ತೀಚೆಗೆ ನಡೆದ ಎಂಇಎಸ್ ಮುಖಂಡರ ಸಭೆ ನಿರ್ಧರಿಸಿದೆ.ಗಡಿ ಸಮಸ್ಯೆಯನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸುವವರೆಗೆ ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಬೆಳಗಾವಿ ಸೇರಿದಂತೆ ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲುಒತ್ತಾಯಪಡಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲು ಎಂಇಎಸ್ ನಿರ್ಧರಿಸಿದೆ.ಸಮಾವೇಶದ ಪೂರ್ವ ಸಿದ್ಧತೆಗಾಗಿ ಮೇ 9 ರಂದು ಎಂಇಎಸ್ ಸದಸ್ಯರ ಸಭೆ ಕರೆಯಲು ನಿರ್ಧರಿಸಲಾಗಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಉಪ ಮುಖ್ಯಮಂತ್ರಿ ಅಜಿತ ಪವಾರ್ ಸಮಾವೇಶದಲ್ಲಿ ಭಾಗವಹಿಸುವುದಾಗಿ ಕಿರಣ ಥಾಕೂರ ನೇತೃತ್ವದ ಎಂಇಎಸ್ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.