ಗಡುವು ತಿರಸ್ಕರಿಸಿದ ಸೇನಾ

7
ಮೈತ್ರಿ ಕಡಿದುಹೋದೀತು – ಮಿತ್ರ ಪಕ್ಷಕ್ಕೆ ಬಿಜೆಪಿ ಎಚ್ಚರಿಕೆ

ಗಡುವು ತಿರಸ್ಕರಿಸಿದ ಸೇನಾ

Published:
Updated:

ನವದೆಹಲಿ (ಪಿಟಿಐ): ತನ್ನ ಅತ್ಯಂತ ಹಳೆಯ ಮಿತ್ರ ಪಕ್ಷ ಶಿವ­ಸೇನಾ ಜತೆ ಸಂಘ­ರ್ಷದ ಹಾದಿ ಹಿಡಿ­ದಿ­­ರುವ ಬಿಜೆಪಿ, ಮುಂದಿನ ತಿಂಗಳು ನಡೆ­ಯಲಿರುವ ಮಹಾ­­­­­ರಾಷ್ಟ್ರ ವಿಧಾನ­ಸಭೆ ಚುನಾ­ವ­­­­ಣೆಯ ಸೀಟು ಹಂಚಿಕೆ ಸೂತ್ರ­­ವನ್ನು ಒಪ್ಪಿ­ಕೊಳ್ಳಿ ಇಲ್ಲವೇ ಮೈತ್ರಿ ಕಡಿದು­ಕೊಳ್ಳಲು ಸಿದ್ಧ­­­ರಾಗಿ ಎಂಬ ಎಚ್ಚರಿಕೆ ನೀಡಿದೆ.  ಆದರೆ ಈ ಎಚ್ಚರಿಕೆಯನ್ನು ತಿರ­­­ಸ್ಕ­­ರಿ­ಸಿ­ರುವ ಶಿವಸೇನಾ ಮುಖಂಡರು, ತಮಗೆ ಯಾರೂ ಆದೇಶ ನೀಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.ಒಟ್ಟು 288 ಕ್ಷೇತ್ರಗಳ ಪೈಕಿ 135­ರಲ್ಲಿ ಬಿಜೆಪಿ ಸ್ಪರ್ಧಿಸುವ ಸೂತ್ರವನ್ನು ಶಿವ­­­­­­­ಸೇನಾ ತಿರಸ್ಕರಿಸಿದೆ. ಆದರೆ ಬಿಜೆಪಿ ಮತ್ತು ಶಿವಸೇನಾ ತಲಾ 135 ಕ್ಷೇತ್ರ­ಗ­ಳಲ್ಲಿ ಸ್ಪರ್ಧಿಸಬೇಕು ಮತ್ತು ಉಳಿದ ಕ್ಷೇತ್ರ­­­­­­­­­ಗಳನ್ನು ಇತರ ಸಣ್ಣ ಮಿತ್ರ ಪಕ್ಷಗಳಿಗೆ ಬಿಟ್ಟು­ಕೊಡಬೇಕು ಎಂಬ ಸೂತ್ರಕ್ಕೆ ಬಿಜೆಪಿ ಅಂಟಿಕೊಂಡಿದೆ.ಪರಸ್ಪರ ಪೂರಕವಾದ ಮತ್ತು ಗೌರ­­ವಾ­­­­­­­­­ರ್ಹವಾದ ಸೀಟು ಹಂಚಿಕೆಗೆ ಒಪ್ಪಿಗೆ ಇದೆಯೇ ಇಲ್ಲವೇ ಎಂಬುದನ್ನು ತಿಳಿಸಲು ಶಿವ­ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರಿಗೆ ಬಿಜೆಪಿ ಗುರುವಾರ ಸಂಜೆಯ ವರೆಗಿನ ಗಡುವು ನೀಡಿತ್ತು.ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಗುರುವಾರ ಬೆಳಿಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಆತ್ಮಗೌರವದ ಬೆಲೆ ತೆತ್ತು ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ. ‘ಆತ್ಮಗೌರವದಲ್ಲಿ ರಾಜಿ ಮಾಡಿಕೊಳ್ಳು­­­ವು­­ದಿಲ್ಲ. ನಾವು ಪಕ್ಷದ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರನ್ನು ಭೇಟಿ­ಯಾಗಿ ಮೈತ್ರಿಯ ಬಗ್ಗೆ ಚರ್ಚೆ ನಡೆಸಿ­ದ್ದೇವೆ. ಶಿವಸೇನಾ ಯಾರದೇ ಆದೇಶ ಪಾಲಿಸು­ವು­ದಿಲ್ಲ. ಉದ್ಧವ್‌ ಅವರೇ ಅಂತಿಮ ನಿರ್ಧಾರ ಕೈಗೊ­ಳ್ಳು­ತ್ತಾರೆ’ ಎಂದು ಸೇನಾ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.ಬಿಜೆಪಿ ಗಡುವು ನೀಡಿದ ಬೆನ್ನಲ್ಲೇ ಉದ್ಧವ್‌ ಠಾಕ್ರೆ ತಮ್ಮ ನಿವಾಸದಲ್ಲಿ ಪಕ್ಷದ ಪ್ರಮುಖರ ತುರ್ತು ಸಭೆ ನಡೆಸಿ­­ದರು. ಬಿಜೆಪಿಯೊಂದಿಗಿನ ಮೈತ್ರಿಗೆ ಸಂಬಂ­­­ಧಿಸಿ ನಿರ್ಧಾರ ಕೈಗೊಳ್ಳುವ ಅಧಿ­­­­ಕಾರ­ವನ್ನು ಸಭೆಯಲ್ಲಿ ಉದ್ಧವ್‌ ಠಾಕ್ರೆ ಅವ­ರಿಗೆ ನೀಡಲಾಗಿದೆ ಎಂದ ರಾವುತ್‌ ತಿಳಿಸಿದ್ದಾರೆ. ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿ­ಸಲು ಬಯಸಿರುವ ಬಿಜೆಪಿಯ ಪ್ರಸ್ತಾ­ವಕ್ಕೆ ಶಿವಸೇನಾ ಪ್ರತಿಕ್ರಿಯೆಯನ್ನೇ ನೀಡ­ದಿ­ರು­­­ವುದು ಬಿಜೆಪಿಯ ಅತೃಪ್ತಿಗೆ ಕಾರಣ­ವಾ­ಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಗೆ ಪ್ರತಿಕ್ರಿಯೆ ನೀಡದ ಠಾಕ್ರೆ ಈ ವಾರದ ಆರಂಭದಲ್ಲಿಯೇ ಸಾರ್ವಜನಿ­ಕ­­ವಾಗಿ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry