ಭಾನುವಾರ, ಜೂನ್ 20, 2021
24 °C

ಗಡುವು ಮುಗಿದರೂ ಶಸ್ತ್ರಾಸ್ತ್ರ ಒಪ್ಪಿಸದ ನಾಗರಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ಸಂಬಂ ಧಪಟ್ಟ ಪೊಲೀಸರ ವಶಕ್ಕೆ ಒಪ್ಪಿಸಲು ಖಾಸಗಿ ವ್ಯಕ್ತಿಗಳಿಗೆ ನೀಡಿದ್ದ ಗಡುವು ಮಾ.19ಕ್ಕೇ ಮುಗಿದಿದೆ. ಆದರೂ ನಗರದಲ್ಲಿ ಇನ್ನೂ 1,000 ಮಂದಿ ಶಸ್ತ್ರಾಸ್ತ್ರಗಳನ್ನು ಪೊಲೀಸರ ಸುಪರ್ದಿಗೆ ನೀಡಿಲ್ಲ.‘ಏ.17ರಂದು ಲೋಕಸಭಾ ಚುನಾವಣೆ ನಡೆಯ ಲಿದ್ದು, ಶಸ್ತ್ರಾಸ್ತ್ರ ಗಳನ್ನು ಹೊಂದಿರುವ ಎಲ್ಲ ಖಾಸಗಿ ವ್ಯಕ್ತಿಗಳು ಮಾ.19ರೊಳಗೆ ಶಸ್ತ್ರಾಸ್ತ್ರ ಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು. ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಅವುಗಳನ್ನು ಹಿಂದಿರುಗಿಸ ಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್‌ ರಾಘವೇಂದ್ರ ಔರಾದಕರ್‌ ಸುತ್ತೋಲೆ ಹೊರ ಡಿಸಿದ್ದರು.ನಗರದಲ್ಲಿ 6,000 ಮಂದಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಈವರೆಗೆ 5,000 ಮಂದಿ ಮಾತ್ರ ಶಸ್ತ್ರಾಸ್ತ್ರಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗಡುವು ಮುಗಿದು ಐದು ದಿನ ಕಳೆದರೂ ಕೆಲವರು ಶಸ್ತ್ರಾಸ್ತ್ರ ನೀಡಿಲ್ಲ. ಅಂಥವರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗುವುದು. ಬಳಿಕ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತ ನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್‌ಪಂತ್, ‘ಅರೆಸೇನಾ ಪಡೆ, ಸೆಕ್ಯುರಿಟಿ ಏಜೆನ್ಸಿಗಳು, ಬ್ಯಾಂಕ್‌ಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆಲವರು ಇನ್ನೂ ಶಸ್ತ್ರಾಸ್ತ್ರಗಳನ್ನು ನೀಡಿಲ್ಲ. ಹೀಗಾಗಿ ನಗರ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿರುವ ಅಂತಹ ವ್ಯಕ್ತಿಗಳ ಮನೆಗೆ ಹೋಗಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದರು.‘ಕೆಲವರು ಆತ್ಮರಕ್ಷಣೆಗೆ ಶಸ್ತ್ರಾಸ್ತ್ರದ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ದುಬಾರಿ  ಮೊತ್ತದ ಶಸ್ತ್ರಾಸ್ತ್ರವಾಗಿರುವುದರಿಂದ ಪೊಲೀಸರ ವಶಕ್ಕೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಸಬೂಬು ಕೊಡುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳ ಲಾಗುವುದು’ ಎಂದು ಹೇಳಿದರು.ಜೋಡಿ ನಳಿಕೆ ಮತ್ತು ಒಂಟಿ ನಳಿಕೆ ಬಂದೂಕು, ಪಾಯಿಂಟ್‌ 22, ಪಾಯಿಂಟ್‌ 32 ಹಾಗೂ ಪಾಯಿಂಟ್‌ 25 ಕ್ಯಾಲಿಬರ್, ಪಿಸ್ತೂಲ್‌ಗಳು, ರಿವಾ ಲ್ವರ್‌ಗಳು ಸೇರಿದಂತೆ ವಿವಿಧ ಮಾದರಿಯ ಶಸ್ತ್ರಾ ಸ್ತ್ರಗಳನ್ನು ಬೆಂಗಳೂರು ಜನ ಬಳಕೆ ಮಾಡುತ್ತಿ ದ್ದಾರೆ. ಅವುಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಲು ನೀಡಿದ್ದ ಗಡುವು ಈಗಾಗಲೇ ಮುಗಿದಿರುವುದರಿಂದ ಪುನಃ ಕಾಲಾವಕಾಶ ನೀಡಲು ಸಾಧ್ಯವಿಲ್ಲ’ ಎಂದು ಪಂತ್‌ ತಿಳಿಸಿದರು.ಶಸ್ತ್ರಾಸ್ತ್ರ ಬಳಸದ ಮಹಿಳೆಯರು

‘ದೆಹಲಿ, ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಕಡಿಮೆ ಇದೆ.ನಗರದಲ್ಲಿ ಒಟ್ಟು 6,000 ಮಂದಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದು, ಇದರಲ್ಲಿ ಮಹಿಳೆಯರ ಸಂಖ್ಯೆ ಶೇ.20ಕ್ಕಿಂತ ಕಡಿಮೆ ಇದೆ’ ಎಂದು ಕಮಲ್‌ ಪಂತ್ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.