ಮಂಗಳವಾರ, ಏಪ್ರಿಲ್ 20, 2021
32 °C

ಗಡ್ಕರಿ ಅವರತ್ತ ಮಾತ್ರವೇ ಏಕೆ ಬೆಟ್ಟು?: ಆರ್‌ಎಸ್‌ಎಸ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಐಎಎನ್‌ಎಸ್): ಭೂ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಆರೋಪಗಳು ಹಲವರ ವಿರುದ್ಧ ಕೇಳಿ ಬಂದಿರುವಾಗ, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರತ್ತ ಮಾತ್ರ ಯಾಕೆ ಬೆಟ್ಟು ಮಾಡಲಾಗುತ್ತಿದೆ ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸ ಬಾಳೆ ಪ್ರಶ್ನಿಸಿದ್ದಾರೆ.ಮೂರು ದಿನಗಳ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಣಿಯು ಚೆನ್ನೈ ಹೊರವಲಯದಲ್ಲಿ  ಶುಕ್ರವಾರ ಉದ್ಘಾಟನೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೊಸಬಾಳೆ, `ಯಾರೇ ತಪ್ಪು ಮಾಡಲಿ ಅವರಿಗೆ ಶಿಕ್ಷೆ ಆಗಲೇ ಬೇಕು. ಕಾನೂನು ಅವರಿಗೆ ಸೂಕ್ತ ಶಿಕ್ಷೆ ನೀಡಲಿದೆ~ ಎಂದರು.ಅರವಿಂದ ಕೇಜ್ರಿವಾಲ್ ಅವರ ಭ್ರಷ್ಟಾಚಾರ ವಿರೋಧಿ ಭಾರತ  (ಐಎಸಿ) ಸಂಘಟನೆ ಮಾಡಿರುವ ಆರೋಪಗಳಿಗೆ  ಆರೋಪ ಎದುರಿಸುತ್ತಿರುವವರು ಮತ್ತು ಅವರ ಪಕ್ಷಗಳು  ಉತ್ತರಿಸಬೇಕು ಎಂದು ನುಡಿದಿದ್ದಾರೆ. `ಕೇಜ್ರಿವಾಲ್ ಸಾಕ್ಷ್ಯಗಳ ಸಮೇತ ಆರೋಪ ಮಾಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಆರೋಪಕ್ಕೆ ಸೂಕ್ತ ಉತ್ತರ ನೀಡಬೇಕು~ ಎಂದರು.ಗಡ್ಕರಿ ವಿರುದ್ಧ ಆರ್‌ಎಸ್‌ಎಸ್ ಕ್ರಮ ಕೈಗೊಳ್ಳುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ವೈಯಕ್ತಿಕ ಭ್ರಷ್ಟಾಚಾರ ಆರೋಪಗಳ ಬಗ್ಗೆ ಚರ್ಚಿಸುವುದಿಲ್ಲ ಎಂದರು.`ಬಿಜೆಪಿಯ ನಿರ್ಧಾರದಲ್ಲಿ ನಮಗೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಕರ್ನಾಟಕದ ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪ್ರಕರಣಗಳಿದ್ದುದರಿಂದ ಅವರ ವಿರುದ್ಧ ಪಕ್ಷದ ನಾಯಕತ್ವ ಕ್ರಮ ಕೈಗೊಂಡಿತ್ತು~ ಎಂದು ಹೊಸಬಾಳೆ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.