ಗಡ್ಕರಿ ಅವ್ಯವಹಾರಕ್ಕೆ ಹೆಚ್ಚಿನ ತನಿಖೆ ಅಗತ್ಯ -ಕೇಜ್ರಿವಾಲ್

7

ಗಡ್ಕರಿ ಅವ್ಯವಹಾರಕ್ಕೆ ಹೆಚ್ಚಿನ ತನಿಖೆ ಅಗತ್ಯ -ಕೇಜ್ರಿವಾಲ್

Published:
Updated:

ನವದೆಹಲಿ( ಐಎಎನ್‌ಎಸ್) :  ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ದದ ಭ್ರಷ್ಟಾಚಾರ ಆರೋಪವನ್ನು ಗುರವಾರವೂ ಪುನರುಚ್ಚರಿಸಿದ್ದು.  ಇದು ಅತಿ ದೊಡ್ಡ ಹಗರಣವಾಗಿರುವ ಕಾರಣ  ವಿಸ್ತೃತ ತನಿಖೆಯಿಂದ ಹೆಚ್ಚಿನ ಸತ್ಯಗಳು ಹೊರಬೀಳಲಿವೆ ಹೇಳಿದರು.

ನಾವು ಈಗ ತಾನೇ ಗಡ್ಕರಿ ಅವರ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ದನಿ ಎತ್ತಿದ್ದು ಇದನ್ನು ಇನ್ನಷ್ಟು ಮುಂದುವರೆಸುತ್ತೇವೆ ಎಂದು ಹೇಳಿದರು .

ರೈತರಿಂದ ವಶಪಡಿಸಿಕೊಳ್ಳಲಾದ ಭೂಮಿಯಲ್ಲಿ ಭಾರತಿಯ ಜನತಾ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಮಹಾರಾಷ್ಟ್ರ ಕಾಂಗ್ರೆಸ್- ಎನ್‌ಸಿಪಿ ಸರ್ಕಾರದ ನೆರವಿನಿಂದ ಭೂಮಿಯನ್ನು ಕಬಳಿಸಿದ್ದಾರೆ ಎಂದು ಬುಧವಾರ ಕೇಜ್ರಿವಾಲ್‌ ಆರೋಪಿಸಿದ್ದರು.ಕಾಂಗ್ರೆಸ್ -ಎನ್‌ಸಿಪಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿದ್ದು ಕೇಜ್ರಿವಾಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಗಡ್ಕರಿ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ತನಿಖೆ ಎದುರಿಸಲು ಸಿದ್ದ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry