ಶನಿವಾರ, ಮೇ 8, 2021
26 °C

ಗಡ್ಡಿ ಗದ್ದೆಮ್ಮದೇವಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ತಾಲ್ಲೂಕಿನ ಕುಪ್ಪಿಗುಡ್ಡ ಗ್ರಾಮದಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ಗಡ್ಡಿ ಗದ್ದೆಮ್ಮದೇವಿ ಜಾತ್ರೆ ಜರಗುತ್ತದೆ. ಸಾಂಪ್ರದಾಯದಂತೆ ಪ್ರಸಕ್ತ ವರ್ಷ ಕುಪ್ಪಿಗುಡ್ಡ ಗ್ರಾಮಕ್ಕೆ ಸೋಮವಾರ ಆಗಮಿಸಿದ್ದ ಗಡ್ಡಿ ಗದ್ದೆಮ್ಮದೇವಿಯನ್ನು ಮಂಗಳವಾರ ಗ್ರಾಮಸ್ಥರು ಅದ್ದೂರಿ ಮೆರವಣಿಗೆ ಮೂಲಕ ಸಡಗರ, ಸಂಭ್ರಮದಿಂದ ಸ್ವಾಗತಿಸಿಕೊಂಡರು.ಮಂಗಳವಾರ ಪಾದಗಟ್ಟೆಯಲ್ಲಿ ದೇವಿಗೆ ಬಂಗಾರ, ಬೆಳ್ಳಿ ಉಡುಗೆಗಳ ಶೃಂಗಾರ ಮಾಡುತ್ತಿದ್ದಂತೆ ದೈವದ ಕಾಯಿ ಅರ್ಪಿಸಿ ಮೆರವಣಿಗೆ ಆರಂಭಿಸಿದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ಕುಂಭ, ಕಳಸ ಸಮೇತ ಮೆರವಣಿಗೆ ಮಾಡುತ್ತ ದೇವಿಯನ್ನು ಗುಡಿಗೆ ಬರಮಾಡಿಕೊಳ್ಳಲಾಯಿತು. ಮಧ್ಯಾಹ್ನ ದೈವದ ಹಿರಿಯರಿಂದ ದೇವಿಗೆ ಉಡಿತುಂಬಿ ಕಾಯಿ ಕರ್ಪೂರ ಸಮರ್ಪಿಸಲಾಯಿತು.ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕರಡಿ ಮಜಲು ಗಮನ ಸೆಳೆದವು. ಡೊಳ್ಳು ಮತ್ತು ಕರಡಿ ಮಜಲು ತಾಳಕ್ಕೆ ಮಾರು ಹೋದ ಯುವಕರು ಮಂಡಕ್ಕಿ ಎಸೆದು, ಜಯಕಾರ ಹಾಕುವ ಮೂಲಕ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಹರಕೆ ತೀರಿಸುವವರು ನೀರೆರೆದು, ಕಾಯಿ ಕರ್ಪೂರ ಅರ್ಪಿಸಿ ಹೂವಿನ ಹಾರ ಹಾಕಿ ಭಕ್ತಿಯಿಂದ ಸ್ವಾಗತಿಸಿಕೊಂಡರು.ಗ್ರಾಮದ ಹಿರಿಯರಾದ ಸಾಬಣ್ಣ ನೆಲೊಗಿ, ದೇವಣ್ಣ ನೆಲೊಗಿ, ಮಾಧವ ನೆಲೊಗಿ, ಬಾಲಪ್ಪ ಮಾನಮಟ್ಟಿ, ಶಂಕರಪ್ಪ, ಶರಣಗೌಡ, ಹನುಮೇಶ, ಚಂದ್ರಕಾಂತ, ಕುಬೇರಪ್ಪ, ಚಂದಪ್ಪ, ಚೆನ್ನಪ್ಪ, ಅಮರಯ್ಯ, ವಿರೇಶ ಮುದ್ನೂರು, ದೇವಪುತ್ರ, ಶಿವಪುತ್ರ ಸೇರಿದಂತೆ ಕುಪ್ಪಿಗುಡ್ಡ, ಸರ್ಜಾಪುರ, ಗುಡದನಾಳ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.