ಗಣತಿದಾರರಿಂದ ಜನಗಣತಿ ಕಾರ್ಯ ಆರಂಭ

7

ಗಣತಿದಾರರಿಂದ ಜನಗಣತಿ ಕಾರ್ಯ ಆರಂಭ

Published:
Updated:

ಕುಶಾಲನಗರ: ದೇಶದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಹಕಾರಿಯಾದ ಭಾರತೀಯ ಜನಗಣತಿ - 2011 ರ ಅಂಗವಾಗಿ ಜನಗಣತಿ ಕಾರ್ಯವನ್ನು ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿಯಲ್ಲಿ ಬುಧವಾರ ಆರಂಭಿಸಲಾಯಿತು.ಸುಂಟಿಕೊಪ್ಪದಲ್ಲಿ ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜನಗಣತಿ ಕಾರ್ಯಕ್ಕೆ ಚಾಲನೆ ನೀಡಿದ ಜಿ.ಪಂ.ಸದಸ್ಯ ಬಿ.ಬಿ.ಭಾರತೀಶ್, ಪ್ರತಿಯೊಬ್ಬರೂ ಗಣತಿದಾರರಿಗೆ ನಿಖರ ಮಾಹಿತಿ ಒದಗಿಸುವ ಮೂಲಕ ಜನಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ತಾ.ಪಂ.ಸದಸ್ಯ ಪಿ.ಎಂ.ಲತೀಫ್, ಗ್ರಾ.ಪಂ.ಅಧ್ಯಕ್ಷೆ ಬಿ.ಐ.ಭವಾನಿ, ಉಪಾಧ್ಯಕ್ಷೆ ಬಿ.ಎಸ್.ಸದಾಶಿವ ರೈ, ಪಿಡಿಓ ಬಿ.ವಿ.ಜಯಣ್ಣ, ಮೇಲ್ವಿಚಾರಕರಾದ ಎಂ. ರಂಗಸ್ವಾಮಿ, ಟಿ.ಜಿ.ಪ್ರೇಮಕುಮಾರ್, ಕೆ.ಮೂರ್ತಿ, ಕಂದಾಯ ಇಲಾಖೆಯ ನೌಕರರು ಇದ್ದರು. ನಂತರ ಗಣತಿದಾರರಾದ ಪಿ.ಟಿ.ವತ್ಸಲ, ಲೀಲಾವತಿ ಜಿ.ಪಂ.ಸದಸ್ಯ ಬಿ.ಬಿ.ಭಾರತೀಶ್ ಅವರ ಕುಟುಂಬದಿಂದ ಮಾಹಿತಿ ಪಡೆಯುವ ಮೂಲಕ ಗಣತಿ ಕಾರ್ಯವನ್ನು ಆರಂಭಿಸಿದರು.ಕುಶಾಲನಗರ ಪಟ್ಟಣದಲ್ಲಿ ಆದಿಶಂಕರಾಚಾರ್ಯ ಬಡಾವಣೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಚರಿತಾ ಪ್ರಕಾಶ್ ಅವರಿಂದ ಮಾಹಿತಿ ಪಡೆಯುವ ಮೂಲಕ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಪ.ಪಂ.ಮುಖ್ಯಾಧಿಕಾರಿ ಪದ್ಮನಾಭ, ಜನಗಣತಿ ಮಾಸ್ಟರ್ ತರಬೇತುದಾರ ಎಚ್.ಕೆ.ತಿಲಗಾರ್, ಮೇಲ್ವಿಚಾರಕ ಎಸ್.ಎಚ್.ಈಶ, ಗಣತಿದಾರರು ಇದ್ದರು.  ಕುಶಾಲನಗರ ಹೋಬಳಿಯ ಗ್ರಾಮಾಂತರ ಪ್ರದೇಶದ ಮುಳ್ಳುಸೋಗೆ ಗ್ರಾಮದಲ್ಲಿ ಆರಂಭಿಸ ಲಾದ ಜನಗಣತಿ ಸಮೀಕ್ಷೆ ಕಾರ್ಯದಲ್ಲಿ ಜಿ.ಪಂ.ಸದಸ್ಯೆ ಚಿತ್ರಲೇಖಾ ಅವರಿಂದ ಮಾಹಿತಿ ಪಡೆಯುವ ಮೂಲಕ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಬಲರಾಂ, ಮೇಲ್ವಿಚಾರಕ ಚಂದ್ರಶೇಖರ್ ಇತರರು ಇದ್ದರುಜನಗಣತಿಗೆ ‘ಕುರುಬ’ ಎಂದು ದಾಖಲಿಸಲು ಮನವಿ


ಈಗಾಗಲೇ ಆರಂಭವಾಗಿರುವ ಜನಗಣತಿ ಸಮೀಕ್ಷೆ ಸಂದರ್ಭ ಕುರುಬ ಸಮುದಾಯದವರು ತಮ್ಮ ಜಾತಿಯನ್ನು ‘ಕುರುಬ’ ಎಂದು ದಾಖಲಿಸ ಬೇಕು ಎಂದು ಪ್ರದೇಶ ಕುರುಬರ ಸಂಘದ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷ ಡಾ ಎಸ್.ಪಿ.ಧರಣೇಂದ್ರ ಬುಧವಾರ ಇಲ್ಲಿ ಮನವಿ ಮಾಡಿದ್ದಾರೆ.ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯದ ಕುಟುಂಬದವರು ತಮ್ಮ ಮನೆಗೆ ಗಣತಿದಾರರು ಜನಗಣತಿಗಾಗಿ ಬಂದ ವೇಳೆಯಲ್ಲಿ ಕುಟುಂಬದ ಅನುಸೂಚಿಯಲ್ಲಿನ ಕಲಂ 7 ರಲ್ಲಿ ‘ಕುರುಬ’ ಎಂದು ಕಡ್ಡಾಯವಾಗಿ ನಮೂದಿಸ ಬೇಕು ಎಂದು ಮನವಿ ಮಾಡಿದರು.ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎ.ಗಂಗಾಧರ್, ಎಂ.ಎಸ್.ಮೊಗಣ್ಣ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry