ಸೋಮವಾರ, ಅಕ್ಟೋಬರ್ 21, 2019
24 °C

ಗಣತಿದಾರರಿಗೆ ಮಾಹಿತಿ ನೀಡಿ

Published:
Updated:

ತರೀಕೆರೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ಜನತೆಯ ಆರ್ಥಿಕ, ಸಾಮಾಜಿಕ  ಗಣತಿ ಕಾರ್ಯ ನಡೆಸಲಾಗುವುದು ಎಂದು  ಶಾಸಕ ಡಿ.ಎಸ್.ಸುರೇಶ್ ತಿಳಿಸಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗಣತಿ ಕಾರ್ಯದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಪ್ರತಿಯೊಬ್ಬರ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸೂಕ್ತ ಮಾಹಿತಿಯನ್ನು ಜನತೆ ಒದಗಿಸಿ ಸರ್ಕಾರದ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದರು.ಉಪ ವಿಭಾಗಾಧಿಕಾರಿ ಶಶಿಧರ್ ಕುರೇರಾ ಮಾತನಾಡಿ, ಸರ್ಕಾರ ಮಹತ್ವದ ಉದ್ದೇಶಕ್ಕಾಗಿ ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿಯನ್ನು ನಡೆಸುತ್ತಿದೆ ಜನತೆ ಪ್ರಸ್ತುತ ಕಾರ್ಯಕ್ಕೆ ಸಹಮತವನ್ನು ತೋರುವಂತೆ ತಿಳಿಸಿದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ದೇವರಾಜ್ ಗಣತಿಯ ಬಗ್ಗೆ ಮಾಹಿತಿ ನೀಡಿ ಮಾತನಾಡಿ,  ಕ್ಷೇತ್ರದ ಜನತೆ ಮಾಹಿತಿದಾರರು ಕೇಳುವ 37ಕ್ಕೂ ಹೆಚ್ಚು ಪ್ರಶ್ನೆಗೆ ಸೂಕ್ತ ಉತ್ತರವನ್ನು ನಮೂದಿಸಲು ಸಹಕರಿಸಬೇಕು ಎಂದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವಿ, ತಹಶೀಲ್ದಾರ್ ರಂಜಿತಾ, ಭಾರತ್ ಎಲೆಕ್ಟ್ರಾನಿಕ್ಸ್‌ನ ಪ್ರಮುಖರಾದ ಹಿಮಂತೇಶ್, ಮಲ್ಲಿಕಾರ್ಜುನ್, ಪ್ರಸನ್ನ  ಇದ್ದರು.

 

Post Comments (+)