ಗಣಪತಿ ವಿಸರ್ಜನಾ ಮೆರವಣಿಗೆಗೆ ಪೊಲೀಸ್‌ ಸರ್ಪಗಾವಲು

7
ಕೋಮು ಸೌಹಾರ್ದ ಕಾಪಾಡಲು ಮನವಿ

ಗಣಪತಿ ವಿಸರ್ಜನಾ ಮೆರವಣಿಗೆಗೆ ಪೊಲೀಸ್‌ ಸರ್ಪಗಾವಲು

Published:
Updated:

ಶಿವಮೊಗ್ಗ: ಜಿಲ್ಲೆಯಲ್ಲಿ ವಿವಿಧೆಡೆ ಗಣಪತಿ ವಿಸರ್ಜನಾ ಮೆರವಣಿಗೆಗೆ ಪೊಲೀಸ್‌  ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ನಗರದ ಶ್ರೀಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಸಂಘಟನಾ ಮಹಾ ಮಂಡಳಿ ಗಣಪತಿ ವಿಸರ್ಜನಾ ಮೆರವಣಿಗೆ ಸೆ.18ರಂದು ಬೆಳಿಗ್ಗೆ 10ರಿಂದ ರಾತ್ರಿ 10ಗಂಟೆಗೆ ನಡೆಯಲಿದು್ದ, ಭೀಮನ ಮಡುವಿನಲ್ಲಿ ವಿಸರ್ಜನೆಯಾಗಲಿದೆ.

  ಈ ಗಣಪತಿ ವಿಸರ್ಜನಾ ಮೆರವಣಿಗೆಯು ಮತೀಯವಾಗಿ ಸೂಕ್ಷ್ಮತೆಯಿಂದ ಕೂಡಿರುವುದರಿಂದ ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ನಗರಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದಕೆ್ಕ ಸಾರ್ವಜನಿಕರು ಸಹಕರಿಸಬೇಕು  ಎಂದು ಜಿಲ್ಲಾ ಪೊಲೀಸ್‌ ವರಿಷಾ್ಠಧಿಕಾರಿ ಎಸ್‌.ಕೌಶಲೇಂದ್ರಕುಮಾರ್‌ ಸೋಮವಾರ ಸುದಿ್ದಗೋಷಿ್ಠಯಲಿ್ಲ ಮನವಿ ಮಾಡಿದರು.ಬಂದೋಬಸ್ತ್ ಕರ್ತವ್ಯಕ್ಕೆ 1 ಎಸ್ಪಿ, 1 ಹೆಚ್ಚುವರಿ ಎಸ್ ಪಿ, 8 ಡಿಎಸ್ ಪಿ, 19 ಸಿಪಿಐ, 55 ಪಿಎಸ್ಐ, 58 ಎಎಸ್ಐ, 330 ಮುಖ್ಯ ಕಾನ್‌ಸ್ಟೇಬಲ್‌, 761 ಕಾನ್‌ಸ್ಟೇಬಲ್‌, 500 ಜನ ಗೃಹರಕ್ಷಕರು, ನಕ್ಸಲ್‌ ನಿಗ್ರಹ ದಳ –ಮಾಸ್ತಿಕಟ್ಟೆ, ನಕ್ಸಲ್‌ ನಿಗ್ರಹ ತಂಡ –ಆಗುಂಬೆ, 1 ವಜ್ರ, 1 ದಿವ್ಯ ದೃಷ್ಟಿ, 14 ಡಿಎಆರ್, 8 ಕೆಎಸ್ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಶಿವಮೊಗ್ಗ ನಗರಾದ್ಯಂತ ಹಾಗೂ ಹೊರ ವಲಯಗಳಲ್ಲಿ  ಗಸ್ತು ನಿರ್ವಹಿಸುವ ಸಲುವಾಗಿ 30 ಮೊಬೈಲ್  ತಂಡವನ್ನು ನಿಯೋಜಿಸಿದೆ, ಅಲ್ಲದೇ, ಮೊಟಾರ್ ಬೈಕ್ ಗಸ್ತು ಹಾಗೂ ಕಾಲ್ನಡಿಗೆ ಗಸ್ತನ್ನೂ ಏರ್ಪಡಿಸಿದೆ ಎಂದು ವಿವರಣೆ ನೀಡಿದರು.ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ 7 ಅಗ್ನಿ ಶಾಮಕ ವಾಹನಗಳನ್ನು, 2 ವೈದ್ಯರ ತಂಡ ಹಾಗೂ ಅಂಬ್ಯುಲೆನ್ಸ್, 4 ಜನ ಕೆಇಬಿ ಲೈನ್ ಮೆನ್, ಹಾಗೂ ಇಬ್ಬರು ಅರಣ್ಯ ಸಿಬ್ಬಂದಿ ಅವರನು್ನ ಉಪಯೋಗಿಸಿಕೊಳ್ಳಲಾಗುವುದು ಎಂದರು.ಮೆರವಣಿಗೆ ಸಂದರ್ಭದಲ್ಲಿ ದುಷ್ಕೃತ್ಯ ಎಸಗುವ ದುರ್ಷ್ಕಮಿಗಳನ್ನು ಮತ್ತು ಕಿಡಿಗೇಡಿಗಳ ಚಲನವಲನಗಳನ್ನು ಗುರುತಿಸುವ ಸಲುವಾಗಿ ಶಿವಮೊಗ್ಗ ನಗರದ ಎಲ್ಲಾ ಪ್ರಮುಖ ಸ್ಥಳಗಳನ್ನು ಗುರುತಿಸಿ 100 ಸಿಸಿ ಕ್ಯಾಮೆರಾಗಳನ್ನು ಮತ್ತು ವೀಡಿಯೊಗ್ರಾಫರ್‌ಗಳನ್ನು  ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇಂದು ಭದ್ರಾವತಿ ಗಣಪತಿ ವಿಸರ್ಜನೆ

ಭದ್ರಾವತಿ ಹೊಸಮನೆಯಲ್ಲಿ ಪ್ರತಿಷ್ಠಾಪಿಸಿರುವ ಎಚ್ಎಂಎಸ್ ಗಣಪತಿ ವಿಸರ್ಜನಾ ಮೆರವಣಿಗೆ ಸೆ.17ರಂದು ಬೆಳಿಗ್ಗೆ 10 ಗಂಟೆಗೆ ಹೊರಟು ಸಂಜೆ ಸುಮಾರು 6ಗಂಟೆ ವರೆಗೆ ನಡೆಯಲಿದ್ದು, ತದನಂತರ ಭದ್ರಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುವುದು ಎಂದ ಅವರು, ಬಂದೋಬಸ್ತ್ ಕರ್ತವ್ಯಕ್ಕೆ 1 ಎಸ್ಪಿ, 1 ಹೆಚ್ಚುವರಿ ಎಸ್ಪಿ, 2 ಡಿಎಸ್ಪಿ, 9 ಸಿಪಿಐ, 23 ಪಿಎಸ್ಐ, 44 ಎಎಸ್ಐ,  135 ಮುಖ್ಯ ಕಾನ್‌ಸ್ಟೇಬಲ್‌, 391 ಕಾನ್‌ಸ್ಟೇಬಲ್‌, 250 ಜನ ಗೃಹರಕ್ಷಕರು, 1 ವಜ್ರ, 1 ದಿವ್ಯ ದೃಷ್ಟಿ, 6 ಡಿಎಆರ್, 3 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ವಿವರ ನೀಡಿದರು.ಶಿವಮೊಗ್ಗ ಮತ್ತು ಭದ್ರಾವತಿಗಳಲ್ಲಿ ರೌಡಿ ನಿಗ್ರಹ ದಳಗಳನ್ನು ರಚನೆ ಮಾಡಿದ್ದು,  ಕಿಡಿಗೇಡಿಗಳು ಇತರ ದುಷ್ಕೃತ್ಯ ಎಸಗುವವರ ಚಟುವಟಿಕೆ ಮೇಲೆ ನಿಗಾವಹಿಸಿ, ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಮಫ್ತಿಯಲ್ಲಿ ಐಡಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದು, ಜೇಬುಗಳ್ಳರ, ಸರಗಳ್ಳರ ಬಗ್ಗೆ ನಿಗಾ ಇಡಲಿದ್ದಾರೆ. ಹೊರ ಜಿಲ್ಲೆಗಳಿಂದ 4 ಡಿಎಸ್ಪಿ, 8 ಸಿಪಿಐ, 20 ಪಿಎಸ್ಐ, 8 ಎಎಸ್ಐ, 150 ಮುಖ್ಯ , 350 ಪಿಸಿ ಹಾಗೂ 300 ಗೃಹರಕ್ಷಕರು, 6 ಡಿಎಆರ್ ಹಾಗೂ 10 ಕೆಎಸ್ಆರ್‌ಪಿ ತುಕಡಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry