ಗಣರಾಜ್ಯೋತ್ಸವ ಪರೇಡಿಗೆ ಕಿನ್ನಾಳ ಕಲೆ

7

ಗಣರಾಜ್ಯೋತ್ಸವ ಪರೇಡಿಗೆ ಕಿನ್ನಾಳ ಕಲೆ

Published:
Updated:

ಕೊಪ್ಪಳ: ನವದೆಹಲಿಯಲ್ಲಿ 2013ರ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ.ರಾಜ್ಯ ವಾರ್ತಾ ಇಲಾಖೆ ಮೂಲಕ ಪ್ರದರ್ಶನಗೊಳ್ಳಲಿರುವ ಸ್ತಬ್ಧಚಿತ್ರವು ರಾಜ್ಯವನ್ನು ಪ್ರತಿನಿಧಿಸಲಿದ್ದು, ಆ ಮೂಲಕ ಈ ವಿಶ್ವವಿಖ್ಯಾತ ಕಲೆಯುವ ಅನಾವರಣಗೊಳ್ಳಲಿದೆ.ಈಚೆಗೆ ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವದ ರಾಷ್ಟ್ರೀಯ ಮಟ್ಟದ ಸ್ತಬ್ಧಚಿತ್ರ ಆಯ್ಕೆ ಸಮಿತಿಯ ಸಭೆಯಲ್ಲಿ ರಾಜ್ಯದಿಂದ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರವನ್ನು ಅಂತಿಮಗೊಳಿಸಲಾಗಿದೆ ಎಂದು ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಉಪನಿರ್ದೇಶಕ ಲಕ್ಷ್ಮೀನಾರಾಯಣ ಜಂಟಿ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.ವಿವಿಧ ಬಗೆಯ ಗೊಂಬೆಗಳ ಮೂಲಕ ಒಂದು ಹೊಸ ಬಣ್ಣದ ಲೋಕವನ್ನೇ ಸೃಷ್ಟಿ ಮಾಡುವ ಕಿನ್ನಾಳ ಗ್ರಾಮದ ಚಿತ್ರಗಾರರಿಗೆ ದೊಡ್ಡ ಇತಿಹಾಸ ಹಾಗೂ ಪರಂಪರೆ ಇದೆ.  ಕಿನ್ನಾಳ ಕಲೆಗೆ ವಿಜಯನಗರ ಸಾಮ್ರೋಜ್ಯವೇ ಮೂಲ ಕೇಂದ್ರವಾಗಿದ್ದು, ಇದರ ರಾಜಧಾನಿಯಾಗಿದ್ದ ಹಂಪಿಯ ಕಲಾ ವೈಭವಕ್ಕೆ ಈ ಕಲೆ ವಿಶೇಷ ಕಾಣಿಕೆ ನೀಡಿದೆ. ಬಣ್ಣಬಣ್ಣದ ಗೊಂಬೆಗಳ ಕಲೆಗಳ ನಡುವೆಯೂ ಕಿನ್ನಾಳ ಗೊಂಬೆಗಳ ಬೆಡಗು, ಬಿನ್ನಾಣ, ಗೊಂಬೆಗಳಲ್ಲಿನ ಸಮತೋಲಿತ ವಿನ್ಯಾಸ ಹಾಗೂ ಆಕಾರಗಳು, ಈ ಕಲೆಯ ವೈಶಿಷ್ಟ್ಯಕ್ಕೆ ಬೆರಗಾಗುವಂತೆ ಮಾಡುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry