ಗಣಿತದ ಕುರಿತ ಆತಂಕ ದೂರ ಮಾಡುವ ಅಗತ್ಯವಿದೆ

7

ಗಣಿತದ ಕುರಿತ ಆತಂಕ ದೂರ ಮಾಡುವ ಅಗತ್ಯವಿದೆ

Published:
Updated:

ಬೆಂಗಳೂರು: `ಗಣಿತದ ಬಗ್ಗೆ ವಿದ್ಯಾರ್ಥಿಗಳಲ್ಲಿ ಇರುವ ಆತಂಕವನ್ನು ದೂರ ಮಾಡುವ ಅಗತ್ಯವಿದೆ~ ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಉಪ ಆಯುಕ್ತ ಇಸಾಂಪಾಲ್ ಕರೆನೀಡಿದರು.ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಕೇಂದ್ರೀಯ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ  ಗಣಿತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಗಣಿತ ವಿಷಯ ಕಠಿಣ ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ, ಯಾರೂ ಹುಟ್ಟುತ್ತಲೇ ಪ್ರತಿಭಾವಂತರಾಗಿರುವುದಿಲ್ಲ. ಗಣಿತದ ಬಗ್ಗೆ ಇರುವ ಸಹಜ ಆತಂಕವನ್ನು ವಿದ್ಯಾರ್ಥಿಗಳು ದೂರಮಾಡಿಕೊಂಡು ಗಣಿತದ ಮೇಲೆ ಹಿಡಿತ ಸಾಧಿಸಬೇಕು~ ಎಂದು ಅವರು ನುಡಿದರು.`ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸಬೇಕು. ಗಣಿತ ಕಲಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಗಣಿತದ ವಿಷಯಗಳಿಗೆ ಸಂಬಂಧಿಸಿದ ವೃತ್ತಿಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು~ ಎಂದರು.ಭಾರತೀಯ ಸಾಂಖ್ಯಿಕ ಸಂಸ್ಥೆಯ ಪ್ರೊ.ಬಿ.ಸೂರಿ ಮಾತನಾಡಿ, `ಬದುಕಿನ ಎಲ್ಲ ಸಂದರ್ಭಗಳಲ್ಲೂ ಗಣಿತದ ಸ್ಥಾನವಿದೆ. ಗಣಿತ ಶಾಸ್ತ್ರದ ಹೆಚ್ಚಿನ ಕಲಿಕೆಗೆ ವಿದ್ಯಾರ್ಥಿ ವೇತನಗಳ ಪ್ರೋತ್ಸಾಹ ಲಭ್ಯವಿದ್ದು, ಇವುಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು~ ಎಂದರು. ಕೆವಿ ಐಐಎಸ್‌ಸಿ ಪ್ರಾಂಶುಪಾಲ ಕೆ.ಎನ್.ಭಟ್ ಮತ್ತಿತರರು ಉಪಸ್ಥಿತರಿದ್ದರು.ಗಣಿತೋತ್ಸವದ ಅಂಗವಾಗಿ ಆಯೋಜಿಸಿದ್ದ ಕರ್ನಾಟಕ- ಗೋವಾ ಪ್ರಾದೇಶಿಕ ಮಟ್ಟದ ಗಣಿತ ಸ್ಪರ್ಧೆಯಲ್ಲಿ ವಿವಿಧ ಕೇಂದ್ರೀಯ ವಿದ್ಯಾಲಯಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry