ಗಣಿತ ಅಧ್ಯಯನ ಬಹು ಉಪಯೋಗಿ

7

ಗಣಿತ ಅಧ್ಯಯನ ಬಹು ಉಪಯೋಗಿ

Published:
Updated:

ಗುಲ್ಬರ್ಗ: ಸ್ನಾತಕೋತ್ತರ ವಿಜ್ಞಾನ ವಿಷಯಗಳ ಅಧ್ಯಯನದಲ್ಲಿ ಮೆಥಮೆಟಿಕಲ್ ಮಾಡೆಲಿಂಗ್ ವಿಷಯದ ಅಧ್ಯಯನ ಅನಿವಾರ್ಯವಾಗಿದ್ದು, ಗಣಿತಶಾಸ್ತ್ರ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಖ್ಯಾತ ಗಣಿತಶಾಸ್ತ್ರಜ್ಞ ಪ್ರೊ. ಎನ್. ರುದ್ರಯ್ಯ ತಿಳಿಸಿದರು.ಗುಲ್ಬರ್ಗ ವಿವಿ ಗಣಿತಶಾಸ್ತ್ರ ವಿಭಾಗದ ಭಾಸ್ಕರ ಸಭಾಂಗಣದಲ್ಲಿ ಮಂಗಳವಾರ ಗಣಿತಶಾಸ್ತ್ರ ವಿಭಾಗ ಮತ್ತು ಯುಜಿಸಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ’ದ್ರವ್ಯ ಚಲನಶಾಸ್ತ್ರದ ಗಡಿಗಳು’ ಎಂಬ ವಿಷಯ ಕುರಿತ ಎರಡು ದಿನಗಳ ಕಾಲದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರ ಮಾಲಿನ್ಯ ನಿವಾರಿಸುವಲ್ಲಿ ಮೆಥಮೆಟಿಕಲ್ ಮಾಡೆಲಿಂಗ್ ನೆರವಾಗಲಿದೆ ಎಂದು ಅವರ ಹೇಳಿದರು.

ಪ್ರೊ. ಈ.ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು.ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಬ್ಬೀರ್ ಅಹ್ಮದ್ ಸ್ವಾಗತಿಸಿದರು. ಪ್ರೊ. ಎಂ.ಎಸ್. ಮಲಶೆಟ್ಟಿ ಸ್ವಾಗತಿಸಿದರು. ಪ್ರೊ. ಎನ್.ಬಿ. ನಡುವಿನಮನಿ ನಿರೂಪಿಸಿದರು. ಸಿ. ಸುಲೋಚನಾ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry