ಬುಧವಾರ, ಜೂನ್ 23, 2021
30 °C

ಗಣಿತ ಡಿವಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮೈಂಡ್ ಗುರು ಸಲ್ಯೂಶನ್ಸ್ ವಿನೂತನವಾದ ಗಣಿತ ವಿಷಯಾಧಾರಿತ ಬಹು ಆಯಾಮದ (multidimensional) ಡಿವಿಡಿಯನ್ನು ಹೊರತಂದಿದೆ.`ಸಾಮಾನ್ಯ ಬುದ್ಧಿಮತ್ಯೆಯ ವಿದ್ಯಾರ್ಥಿಯನ್ನು ಗಮನದಲ್ಲಿಟ್ಟುಕೊಂಡು ಈ ಡಿವಿಡಿಯನ್ನು ರಚಿಸಲಾಗಿದೆ. ಇದು ಸುಮಾರು ಹತ್ತು ಸಾವಿರದಷ್ಟು ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ಹೊಂದಿದ್ದು, ಧ್ವನಿ ಅವರೋಹಣದ ಸಹಾಯದಿಂದ, ಆಟದ ಮಾದರಿಯ ಕಲಿಕೆಯನ್ನು ಈ ಮೂಲಕ ಉತ್ತೇಜಿಸಲಾಗಿದೆ.ಹತ್ತು ತಜ್ಞರ ಗುಂಪು 1500 ವಿದ್ಯಾರ್ಥಿಗಳ ಮೇಲೆ ಸಂಶೋಧನೆ ನಡೆಸಿ ವೈಜ್ಞಾನಿಕ ಮಾದರಿಯಲ್ಲಿ ಈ ಡಿವಿಡಿಯನ್ನು ರಚಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಈ ಡಿವಿಡಿಯನ್ನು ಉಪಯೋಗಿಸುವ ಮೂಲಕ ಪ್ರತಿ ಪ್ರಶ್ನೆಯನ್ನು ನಿರ್ದಿಷ್ಟ ಮಾದರಿಯಲ್ಲಿ ಹಾಗೂ ನಿರ್ದಿಷ್ಟ ಕಾಲಮಾನದಲ್ಲಿ ಬಗೆಹರಿಸುವುದನ್ನು ಕಲಿಯಬಹುದು. `ವಿದ್ಯಾರ್ಥಿಯು ನಿತ್ಯ ಕೇವಲ ಒಂದು ಗಂಟೆ ಇದರೊಂದಿಗೆ ಕಳೆದರೆ ಸಾಕು. ಕಲಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬರುತ್ತದೆ. ವಿಷಯ ತಜ್ಞರು ಸಾಕಷ್ಟು ಸಂಶೋಧನೆ ಮಾಡಿ ಈ ಡಿವಿಡಿ ರಚಿಸಿದ್ದಾರೆ. ವಿದ್ಯಾರ್ಥಿಗಳು ಮಾತ್ರವಲ್ಲ ಪಾಲಕರು, ಶಿಕ್ಷಕರು ಇದರ ಪ್ರಯೋಜನ ಪಡೆಯಬಹುದು~ ಎಂದು ಸಂಸ್ಥೆಯ ನಿರ್ದೇಶಕ ಕೆ.ಎ.ಆದಿಕೇಶವಪ್ರಕಾಶ್ ಹೇಳುತ್ತಾರೆ.

 

ಆಸಕ್ತರು ಮಾಹಿತಿಗಾಗಿವೆಬ್‌ಸೈಟ್‌ www.mindguru.co.in ಅಥವಾ ಇಮೇಲ್ info@mindguru.co.in ಅಥವಾ ಮೊಬೈಲ್- 9845709911 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.