ಗಣಿತ ವರ್ಷ ಅರ್ಥಪೂರ್ಣವಾಗಲಿ

7

ಗಣಿತ ವರ್ಷ ಅರ್ಥಪೂರ್ಣವಾಗಲಿ

Published:
Updated:

 `ಎಣಿಕೆಯನ್ನು ಕಲಿಸಿಕೊಟ್ಟ ಭಾರತಿಯರಿಗೆ ನಾವು ಎಷ್ಟು ಋಣಿಗಳಾಗಿದ್ದರೂ ಸಾಲದು, ಎಣಿಕೆಯ ಕ್ರಮ ಇಲ್ಲದೆ ಯಾವುದೇ ವೈಜ್ಞಾನಿಕ ಸಂಶೋಧನೆ ಸಾಧ್ಯವಾಗುತ್ತಿರಲಿಲ್ಲ~ ಎಂದು ಪ್ರಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಹೇಳಿದ್ದರು. ಈ ಜಗತ್ತೇ ಗಣಿತಮಯ.ಈ ನಿಟ್ಟಿನಲ್ಲಿ ಇಂದು ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಪ್ರಖ್ಯಾತ ಗಣಿತಜ್ಞ ಶ್ರಿನಿವಾಸ ರಾಮಾನುಜನ್ ಅವರ 125ನೇ ಜನ್ಮ ಜಯಂತಿಯ ಅಂಗವಾಗಿ ಈ (2012) ವರ್ಷವನ್ನು  `ರಾಷ್ಟ್ರೀಯ ಗಣಿತ ವರ್ಷ~ ಎಂದು ಘೋಷಿಸಿರುವುದು ಅಭಿನಂದನಾರ್ಹ.ಈ ಹಿನ್ನೆಲೆಯಲ್ಲಿ ಸರ್ಕಾರ ದೇಶದ ಪ್ರತಿ ಶಾಲೆಯಲ್ಲಿ ಗಣಿತ ವಿಷಯದ ಬಗ್ಗೆ ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಳ್ಳಬೇಕಿದೆ. ಗಣಿತದ ರಸಪ್ರಶ್ನೆ, ಪ್ರತಿಭಾ ಪರೀಕ್ಷೆ, ಗಣಿತ ತಜ್ಞರ ಪರಿಚಯ, ಗಣಿತದ ಮೋಜು, ವಸ್ತು ಪ್ರದರ್ಶನ, ಗಣಿತ ಸಮ್ಮೇಳನ, ನಿತ್ಯಜೀವನದಲ್ಲಿ ಗಣಿತದ ಬಳಕೆ ಇತ್ಯಾದಿಗಳ ಬಗ್ಗೆ ವಿಷಯ ತಜ್ಞರಿಂದ ಉಪನ್ಯಾಸ, ಚರ್ಚೆ ಹಾಗೂ  ಗಣಿತ ಕ್ಷೇತ್ರಕ್ಕೆ ಭಾರತೀಯರ ಕೊಡುಗೆಗಳನ್ನು ಸ್ಮರಿಸುವ ಹಲವಾರು ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುವ ಅಗತ್ಯವಿದೆ.

 

ಶಾಲಾ-ಕಾಲೇಜುಗಳಲ್ಲಿ ಗಣಿತ ಪ್ರಯೋಗಾಲಯ ಪ್ರಾರಂಭಿಸುವುದರ ಮೂಲಕ ಈ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಮಾಡಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry