ಮಂಗಳವಾರ, ಜೂನ್ 15, 2021
21 °C

ಗಣಿತ, ವಿಜ್ಞಾನ ಪರಿಣಾಮಕಾರಿ ಬೋಧನೆಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ:  ಗಣಿತ ಮತ್ತು ವಿಜ್ಞಾನವನ್ನು ವಿದ್ಯಾರ್ಥಿಗಳಿಗೆ ಸರಳ ಮತ್ತು ಪರಿ ಣಾಮಕಾರಿಯಾಗಿ ಶಿಕ್ಷಕರು ಬೋಧಿ ಸಬೇಕು ಎಂದು ಜಿಲ್ಲಾಧಿಕಾರಿ ಎನ್. ಎಸ್.ಪ್ರಸನ್ಕುಮಾರ ಕರೆ ನೀಡಿದರು.ನಗರದ ತೋಂಟದಾರ್ಯ ಎಂಜಿನಿ ಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಶಿಕ್ಷಕರ ಗಣಿತ ಮತ್ತು ವಿಜ್ಞಾನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಗಣಿತ ಮತ್ತು ವಿಜ್ಞಾನ ವಿಷಯ ವೆಂದರೆ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎನ್ನುವಂತಾಗಿದೆ. ಈ ಮಾತಿಗೆ ಕಾರಣಗಳು ಹಲವು ಇರಬಹುದಾ ದರೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಇತರ ವಿಷಯ  ಕಲಿಸುವಾಗಿನ ಆಸಕ್ತಿ, ಕೌಶಲ ವನ್ನು ಗಣಿತ ಮತ್ತು ವಿಜ್ಞಾನ ವಿಷಯ ದಲ್ಲೂ ತೋರಿಸಬೇಕು. ಗಣಿತದ ಸೂತ್ರಗಳನ್ನು ಸರಳೀಕರಣಗೊಳಿಸಿ, ವಿಜ್ಞಾನವನ್ನು ಪಾಠದೊಂದಿಗೆ ಪ್ರಯೋ ಗಶಾಲೆಯಲ್ಲಿಯೂ ಸಹ ಪರಿಣಾ ಮಕಾರಿಯಾಗಿ ವಿದ್ಯಾರ್ಥಿಗಳಿಗೆ ಮನ ವರಿಕೆಯಾಗುವ ರೀತಿಯಲ್ಲಿ ಕಲಿಸ ಬೇಕಿದೆ ಎಂದು ತಿಳಿಸಿದರು.ವಿಜ್ಞಾನ ಮತ್ತು ತಂತ್ರಜ್ಞಾನ  ಆಧುನಿಕ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಗೊಂಡಿದೆ. ಹೊಸ ತಂತ್ರಜ್ಞಾನ ಆವಿಷ್ಕಾರಗಳಾಗಿವೆ.  ಜ್ಞಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿಕೊಳ್ಳುವ ಹಿನ್ನಲೆಯಲ್ಲಿ ಕಾರ್ಯಾಗಾರಗಳು ನಡೆಯಬೇಕು ಎಂದರು.ಸಿಟಿಇ ಸಹ ನಿರ್ದೇಶಕ ಮಂಟಲಿಂಗಾ ಚಾರ್ ಹಾಗೂ ತೋಂಟದಾರ್ಯ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಶಿವಾ ನಂದ ಪಟ್ಟಣಶೆಟ್ಟಿ  ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ, ಪ್ರಗತಿ ತರಲು  ಕಾರ್ಯಾಗಾರದ ಅವಶ್ಯಕತೆ ಇದೆ ಎಂದು ನುಡಿದರು.

ಡಿಡಿಪಿಐ ಬಿ.ವಿ.ರಾಜೇಂದ್ರಪ್ರಸಾದ್ ಮಾತನಾಡಿದರು.ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ, ಮುಂಡರಗಿ ಬಿಇಒ ಎಂ.ಎ.ರಡ್ಡೇರ, ರೋಣ ಬಿಇಒ ಡಿ.ಐ.ಅಸುಂಡಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ್, ಡಯಟ್ ಪ್ರಾಚಾರ್ಯ ಬಿ.ಎಸ್.ರಘುವೀರ, ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಹುಬ್ಬಳ್ಳಿ, ಸಂಪ ನ್ಮೂಲ ವ್ಯಕ್ತಿ ಸುರೇಶ ಕುಲಕರ್ಣಿ ಹಾಜರಿದ್ದರು. ದಕ್ಷಿಣ ವಲಯ ಇಂಡಿಯಾ ವಿಜ್ಞಾನ ಸಮ್ಮೇಳನದಲ್ಲಿ ವಿಶೇಷ ಶಿಕ್ಷಕಿ ಪ್ರಶಸ್ತಿ ವಿಜೇತೆ ಪದ್ಮಾ ಹುಂಬಿ ಅವರನ್ನು ಸನ್ಮಾನಿಸಲಾಯಿತು. ವಿಷಯ ಪರಿವೀಕ್ಷಕ ಎ.ಎ.ಖಾಜಿ ಸ್ವಾಗತಿಸಿದರು, ಕೆ.ಪಿ.ಸಾಲಿಮಠ ನಿರೂಪಿಸಿದರು ಕೊನೆಗೆ ಡಿ.ಡಿ.ದಾಸರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.