ಗಣಿ ಕಡತ ನಾಪತ್ತೆ ದೂರು ದಾಖಲು

7

ಗಣಿ ಕಡತ ನಾಪತ್ತೆ ದೂರು ದಾಖಲು

Published:
Updated:

ಪಣಜಿ (ಪಿಟಿಐ): ಅಕ್ರಮವಾಗಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿದ ಪ್ರಕರಣವೊಂದರ ಕಡತ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಜಿತೇಂದ್ರ ದೇಶ್‌ಪ್ರಭು ಹಾಗೂ ಗಣಿ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಗೋವಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಪ್ರಸನ್ನ ಆಚಾರ್ಯ ಅವರು ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಸಲ್ಗೊಂಕರ್, ಗಣಿ ಇಲಾಖೆ ಮಾಜಿ ನಿರ್ದೇಶಕ ಅರವಿಂದ ಲೋಲಿಂಕರ್  ಮತ್ತು ಗಣಿ ಇಲಾಖೆ ಇತರ ಮೂವರು ಅಧಿಕಾರಿಗಳನ್ನು ಹೆಸರಿಸಲಾಗಿದೆ ಎಂದು  ಮೂಲಗಳು ತಿಳಿಸಿವೆ.ಪೆರ್ನಮ್ ತಾಲ್ಲೂಕಿನಲ್ಲಿರುವ ತಮಗೆ ಸೇರಿದ ಆಸ್ತಿಯಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರು ತೆಗೆಯುತ್ತಿದ್ದ ಪ್ರಕರಣದಲ್ಲಿ ದೇಶ್‌ಪ್ರಭು ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಕಡತ ಗಣಿ ಇಲಾಖೆಯಿಂದ ನಾಪತ್ತೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಆದರೆ ದೇಶ್‌ಪ್ರಭು ಅವರು ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry