ಗಣಿ ಕಾರ್ಮಿಕರಿಗೆ ಸೌಲಭ್ಯ: ಭರವಸೆ

7

ಗಣಿ ಕಾರ್ಮಿಕರಿಗೆ ಸೌಲಭ್ಯ: ಭರವಸೆ

Published:
Updated:

ಕೆಜಿಎಫ್: ಗಣಿ ಕಾಲೋನಿಗಳಲ್ಲಿ ವಾಸಿಸುತ್ತಿರುವ ಗಣಿ ಕಾರ್ಮಿಕರಿಗೆ ಸೂಕ್ತ ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹೇಳಿದರು.

ನಗರದ ಮಾರಿಕುಪ್ಪಂ, ಸೆಂಟ್‌ಮೇರೀಸ್ ರಸ್ತೆ, ಇಟಿಬ್ಲಾಕ್, ಕೆನಡೀಸ್ ಲೈನ್, ಹೆನ್ರೀಸ್ ಲೈನಿಗೆ ಮಂಗಳವಾರ ಭೇಟಿ ನೀಡಿದ ಅವರು, ಕಾರ್ಮಿಕರ ಕಾಲೊನಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂಬ ಆರೋಪವಿತ್ತು.

 

ಮೂಲಸೌಕರ್ಯ ಕಲ್ಪಿಸು ವುದು ಸರ್ಕಾರದ ಜವಾಬ್ದಾರಿ. ಈ ಪ್ರದೇಶ ಚಿನ್ನದ ಗಣಿಗೆ ಸೇರಿದ್ದರೂ, ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆ ರೂಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಗಣಿ ಕಾಲೊನಿಗಳು ಸ್ಲಂ ಎಂದು ಘೋಷಣೆ ಮಾಡಲು ಅರ್ಹವಾಗಿವೆ. ಸ್ಲಂಬೋರ್ಡಿನ ಅಧಿಕಾರಿ ಗಳು ಸಹ ಇಂತಹ ಮನೆಗಳನ್ನು ಗುರುತಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳ ಲಾಗುವುದು ಎಂದು ಅವರು ಹೇಳಿದರು.ಜಿಲ್ಲಾಧಿಕಾರಿ ಡಾ.ವಿಶ್ವನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರಜೋಳನ್, ತಹಶೀಲ್ದಾರ್ ಮಂಗಳ, ವಿಶೇಷ ತಹಶೀಲ್ದಾರ್ ಪೂರ್ಣಿಮಾ, ನಗರಸಭೆ ಆಯುಕ್ತ ಬಾಲಚಂದ್ರ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry