ಶನಿವಾರ, ಮೇ 15, 2021
22 °C

ಗಣಿ: ಬಳ್ಳಾರಿಯತ್ತ `ಎಸ್‌ಎಐಎಲ್' ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಬಳ್ಳಾರಿಯ ಈಶಾನ್ಯ ಬ್ಲಾಕ್‌ನಲ್ಲಿರುವ 140 ಹೆಕ್ಟೇರ್ ಪ್ರದೇಶದ ಕಬ್ಬಿಣದ ಅದಿರು ಗಣಿಯನ್ನು ಗುತ್ತಿಗೆ ಪಡೆಯಲು ಕೇಂದ್ರ ಸರ್ಕಾರದ ಒಡೆತನದ `ಭಾರತೀಯ ಉಕ್ಕು ಪ್ರಾಧಿಕಾರ'  (ಎಸ್‌ಎಐ ಎಲ್) ಆಸಕ್ತಿ ತೋರಿದ್ದು, ಶೀಘ್ರವೇ ಪರವಾನಗಿಗಾಗಿ ರಾಜ್ಯ ಸರ್ಕಾರದ ಜತೆ ಮಾತುಕತೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.ಇಲ್ಲಿ ಹೊರತೆಗೆಯುವ ಕಬ್ಬಿಣದ ಅದಿರನ್ನು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಘಟಕಕ್ಕೆ(ವಿಐಎಸ್‌ಎಲ್) ಪೂರೈಸಲು ಯೋಜಿಸಲಾಗಿದೆ ಎಂದು `ಎಸ್‌ಎಐಎಲ್'ನ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಶುಕ್ರವಾರ ತಿಳಿಸಿದ್ದಾರೆ.ಬಳ್ಳಾರಿಯಲ್ಲಿರುವ ಎಂಟು ಗಿರಿಶ್ರೇಣಿಯಲ್ಲಿ ಉತ್ತಮ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಲಭ್ಯವಿದೆ. ಈಶಾನ್ಯ ಬ್ಲಾಕ್ ಕೂಡ ಇದರಲ್ಲಿ ಒಂದು. ಸದ್ಯ `ಎಸ್‌ಎಐಎಲ್' ದಕ್ಷಿಣ ರಾಜ್ಯಗಳಲ್ಲಿ ಯಾವುದೇ ಕಬ್ಬಿಣ ಅದಿರು ಗಣಿ ಹೊಂದಿಲ್ಲ. ಈಶಾನ್ಯ ಬ್ಲಾಕ್‌ನಲ್ಲಿರುವ ಈ ಗಣಿಯಲ್ಲಿ 1 ಕೋಟಿ ಟನ್‌ಗಳಷ್ಟು ಅದಿರು ನಿಕ್ಷೇಪ ಇದೆ. ಇದನ್ನು ವಿಶೇಷವಾಗಿ `ವಿಐಎಸ್‌ಎಲ್'ನ ಬೇಡಿಕೆ ಪೂರೈಸಲು ಬಳಸಬಹುದು ಎಂದು ಮೂಲಗಳು ಹೇಳಿವೆ.`ಎನ್‌ಎಂಡಿಸಿ' ನಂತರ ದೇಶದ ಎರಡನೇ ಅತಿ ದೊಡ್ಡ ಕಬ್ಬಿಣ ಅದಿರು ಗಣಿಗಾರಿಕೆ ಕಂಪೆನಿಯಾಗಿರುವ `ಎಸ್‌ಎಐಎಲ್' ವಾರ್ಷಿಕ 1.40 ಕೋಟಿ ಟನ್‌ಗಳಷ್ಟು ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. 2015-16ರ ವೇಳೆಗೆ ಉಕ್ಕು ತಯಾರಿಕೆ ಸಾಮರ್ಥ್ಯವನ್ನು 2.30 ಕೋಟಿ ಟನ್‌ಗಳಿಗೆ ಹೆಚ್ಚಿಸಿಕೊಳ್ಳುವ ಗುರಿಯನ್ನೂ ಹೊಂದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.