ಶುಕ್ರವಾರ, ಮೇ 7, 2021
22 °C

ಗಣಿ ಯೋಜನೆ: ಪರಿಸರ ಅನುಮತಿ ಪರಿಶೀಲನೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಪ್ರೀಂಕೋರ್ಟ್ ನಿಷೇಧಾಜ್ಞೆಯನ್ನು ರದ್ದುಪಡಿಸುವವರೆಗೂ ಕರ್ನಾಟಕದ ಚಿತ್ರದುರ್ಗ, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಯಾವುದೇ ಗಣಿಗಾರಿಕೆ ಯೋಜನೆಯ ಪ್ರಸ್ತಾವಕ್ಕೆ `ಪರಿಸರ ಅನುಮತಿ~ ನೀಡಿಕೆಯನ್ನು ಪರಿಶೀಲಿಸದಿರಲು ಕೇಂದ್ರ ಪರಿಸರ ಇಲಾಖೆ ನಿರ್ಧರಿಸಿದೆ.ವಿವಿಧ ಹಂತದ ಮಂಜೂರಾತಿಗೆ ಕಾದಿರುವ ಗಣಿಗಾರಿಕೆ ಉದ್ಯಮಗಳ ಅರ್ಜಿಗಳನ್ನು ಯಥಾಸ್ಥಿತಿಯಲ್ಲಿ ಇಡಲು ತೀರ್ಮಾನಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಈ ಮೂರು ಜಿಲ್ಲೆಗಳಿಂದ ಗಣಿಗಾರಿಕೆಗೆ ಸಂಬಂಧಿಸಿದಂತೆ ಹೊಸದಾಗಿ ಬರುವ ಅರ್ಜಿಗಳನ್ನು ಸಹ ಪರಿಶೀಲಿಸದಿರಲು ಇಲಾಖೆ ತೀರ್ಮಾನಿಸಿದೆ.ಈ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ನಡೆದು ಪರಿಸರ ಅಸಮತೋಲನ ಉಂಟಾಗಿದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಇತ್ತೀಚೆಗೆ ಇಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.