ಗಣೇಶನಿಗೆ ಸಂಭ್ರಮದ ವಿದಾಯ

7

ಗಣೇಶನಿಗೆ ಸಂಭ್ರಮದ ವಿದಾಯ

Published:
Updated:

ವಿಜಾಪುರ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ  ಪ್ರತಿಷ್ಠಾಪಿಸಿದ್ದ ಬಹುತೇಕ ಗಣೇಶ ವಿಗ್ರಹಗಳನ್ನು 7ನೇ ದಿನವಾದ ಭಾನುವಾರ ಸಡಗರದಿಂದ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.ನಗರದಲ್ಲಿ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಆನೆ, ಕುದುರೆಗಳನ್ನು ಬಳಸಿಕೊಳ್ಳಲಾಗಿತ್ತು. ಯುವಕರು ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿ­ಸಿದರು. ಗಜಾನನ ಉತ್ಸವ ಮಹಾ­ಮಂಡಳಿಯವರು ಇಲ್ಲಿಯ ಗಾಂಧಿಚೌಕ್‌ನಲ್ಲಿ ಸಮಾರಂಭ ಏರ್ಪಡಿಸಿ ಎಲ್ಲ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳ ಮುಖಂಡರನ್ನು ಸನ್ಮಾನಿಸಿದರು.ಮೆರವಣಿಗೆ ಸುಗಮವಾಗಿ ಸಾಗುವ ದೃಷ್ಟಿಯಿಂದ ಪೊಲೀಸರು ಇಲ್ಲಿಯ ಗಾಂಧಿಚೌಕ್‌ನಿಂದ ಶಿವಾಜಿ ಚೌಕ್‌ವರೆಗಿನ ರಸ್ತೆಯ ಮಧ್ಯಭಾಗ­ದಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರು. ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry