ಭಾನುವಾರ, ಡಿಸೆಂಬರ್ 15, 2019
26 °C

ಗಣೇಶನಿಗೆ 4 ಟನ್ ಲಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣೇಶನಿಗೆ 4 ಟನ್ ಲಾಡು

ರಾಜಮಂಡ್ರಿ (ಪಿಟಿಐ): ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುವ 10 ದಿನಗಳ ಗಣೇಶ ಉತ್ಸವಕ್ಕೆ ಇಲ್ಲಿನ  ಸಿಹಿ ತಯಾರಕರೊಬ್ಬರು 4,000 ಕೆ.ಜಿ ತೂಕದ `ಮಹಾ ಲಾಡು' ಸಿದ್ದಪಡಿಸಿದ್ದಾರೆ.4 ಟನ್ ಗಾತ್ರದ ಲಾಡನ್ನು ಹೈದರಾಬಾದ್‌ನ ಖೈರತಾಬಾದ್ ಗಣೇಶನಿಗೆ ವಿಶೇಷವಾಗಿ ತಯಾರಿಸಲಾಗಿದೆ.ತಪೇಸ್ವರಂ ಗ್ರಾಮದ ಸುರುಚಿ ಸ್ವೀಟ್ಸ್ ಮಾಲೀಕ ಮಲ್ಲಿಕಾರ್ಜುನ ರಾವ್ ಲಾಡನ್ನು ತಯಾರಿಸಿದ್ದಾರೆ. ಗ್ರಾಮದ ಜನರು ಮೆರವಣಿಗೆ ಮೂಲಕ ಲಾಡನ್ನು ಅಲಂಕರಿಸಿದ ಟ್ರಕ್ ಮೂಲಕ ಹೈದರಾಬಾದ್‌ಗೆ ಕಳುಹಿಸಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.1,600 ಕೆಜಿ ಸಕ್ಕರೆ, 900 ಕೆ.ಜಿ ತುಪ್ಪ,  50 ಕೆಜಿ ಬಾದಾಮಿ, 200 ಕೆ.ಜಿ ಗೋಡಂಬಿ 1,000 ಕೆ.ಜಿ ಕಡಲೆ ಬೇಳೆಯಿಂದ ಲಾಡನ್ನು ತಯಾರಿಸಲಾಗಿದೆ.

ಈ ಲಾಡನ್ನು ಒಂದು ವಾರದಲ್ಲಿ 50 ಜನರ ತಂಡ ತಯಾರಿಸಿದೆ.

ಪ್ರತಿಕ್ರಿಯಿಸಿ (+)