ಶುಕ್ರವಾರ, ಜೂಲೈ 10, 2020
21 °C

ಗಣೇಶನ ಚಾಲೆಂಜ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣೇಶನ ಚಾಲೆಂಜ್!

ಅದು ಪಾಳು ಕಾರ್ಖಾನೆ. ಒಳಹೊಕ್ಕವರ ಪ್ರಜ್ಞೆ ತಪ್ಪುತ್ತದೆ. ಇಂಥ ಕಾರ್ಖಾನೆಯಲ್ಲಿ ಸಿಕ್ಕಿಕೊಳ್ಳುವ ಆರು ಜನ ತಮ್ಮ ನೆನಪನ್ನು ಕಳೆದುಕೊಂಡು, ಉಳಿವಿಗಾಗಿ ಪರದಾಡುತ್ತಾರೆ. ಕೊನೆಯಲ್ಲಿ ಕಾರಣ ಹೊರಬೀಳುತ್ತದೆ. ಅದು `ಚಾಲೆಂಜ್~ ಚಿತ್ರದ ಕತೆ. ಇದೊಂದು ಕುತೂಹಲಕಾರಿ ಸಸ್ಪೆನ್ಸ್ ಚಿತ್ರ ಎನ್ನುವುದು ಚಿತ್ರತಂಡದ ಹೇಳಿಕೆ.ಚೆನ್ನೈ ಮೂಲದ ನಿರ್ಮಾಪಕ, ನಿರ್ದೇಶಕರು ಕನ್ನಡ ಸಿನಿಮಾ ಮಾಡುವ ಮೂಲಕ ಅಕ್ಷರಶಃ `ಚಾಲೆಂಜ್~ ಸ್ವೀಕರಿಸುತ್ತಿರುವ ಸಿನಿಮಾ ಇದು. ಚಿತ್ರದ ಚಿತ್ರೀಕರಣ ಈಗಾಗಲೇ ಬೆಂಗಳೂರಿನ `ಮೈಸೂರು ಲ್ಯಾಂಪ್ಸ್~ ಪರಿಸರದಲ್ಲಿ ಆರಂಭವಾಗಿದೆ.

ನಿರ್ದೇಶಕ ಗಣೇಶ್ ಕಾಮರಾಜ್. ತಮಿಳಿನ `ಪೆರುಸು~, `ಸುತ್ತಪಳಂ~, `ವಿಲೈ~ ಸಿನಿಮಾ ನಿರ್ದೇಶಿಸಿದ ಅನುಭವ ಅವರಿಗಿದೆ.ಒಂದು ವರ್ಷ ಸ್ಕ್ರಿಪ್ಟ್ ಕೆಲಸ ಮಾಡಿರುವ ಅವರು ಹರೀಶ್ ರಾಜ್, ದಿಲೀಪ್ ರಾಜ್, ಅಚ್ಯುತ್ ಕುಮಾರ್ ಅವರಂಥ ಉತ್ತಮ ಕಲಾವಿದರನ್ನು ಕಲೆಹಾಕಿದ್ದಾರೆ. `ಚಾಲೆಂಜ್~ನ ನಿರ್ಮಾಪಕ ಶ್ರೀಧರ್. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅಚ್ಯುತ ಕುಮಾರ್, `ನನ್ನದು ಗೆಳೆಯರ ಹಣದಲ್ಲಿ ಬದುಕು ನಡೆಸುವವನ ಪಾತ್ರ. ನಾನೂ ಕೂಡ ಕಾರ್ಖಾನೆಯಲ್ಲಿ ಪ್ರಜ್ಞೆ ತಪ್ಪುತ್ತೇನೆ. ಅದಕ್ಕೆ ಕಾರಣ ಕೊನೆಯಲ್ಲಿ ತಿಳಿಯುತ್ತದೆ~ ಎಂದರು.ನಾಯಕಿ ಸಂಜನಾ ಸಿಂಗ್ ಈಗಾಗಲೇ ತಮಿಳು ಸಿನಿಮಾದಲ್ಲಿ ನಟಿಸಿರುವ ಚೆಲುವೆ.ಕಾಮರಾಜ್ ಅವರ ಆಹ್ವಾನದ ಮೇರೆಗೆ ಈ ಸಿನಿಮಾ ಒಪ್ಪಿಕೊಂಡಿದ್ದಾಗಿ ಹೇಳಿದರು. ನಾಯಕರಾದ ಹರೀಶ್ ರಾಜ್, ದಿಲೀಪ್ ರಾಜ್  ಸುದ್ದಿಗೋಷ್ಠಿ ಮುಗಿದರೂ ಪ್ರತ್ಯಕ್ಷರಾಗಲಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.