ಗಣೇಶನ ಸ್ಟೋರಿ

6
ಚಂದ ಪದ್ಯ

ಗಣೇಶನ ಸ್ಟೋರಿ

Published:
Updated:
ಗಣೇಶನ ಸ್ಟೋರಿ

ಎಲ್ಲಾ ಆಬ್ಸ್ಟೆಕಲ್ಸ್ ರಿಮೂವ್ ಮಾಡಪ್ಪಾ ಅಂತ ಕೋರಿ

    ಹೇಳ್ತೀನಿ ಕೇಳಿ ಇಂದಿನ ಮಕ್ಕಳಿಗೆ ಗಣೇಶನ ಸ್ಟೋರಿ

ಸ್ವೀಟೀ, ಹೇಳ್ತೀನಿ ಕೇಳು ಗಣೇಶನ ಕತೇನ

ಸೆಲಿಬ್ರೇಟ್ ಮಾಡೋದಕ್ಕೆ ಅವನ ಬರ್ತ್ ಡೇನ

ಅವನ ಮಮ್ಮಿ ಡಬಲ್ ಲೇಯರ್ ಚಾಕ್ಲೇಟ್ ಕೇಕ್ ಮಾಡಿದ್ಲು

ಯಾಕೇಂದ್ರೆ ಗಣೇಶಂಗೆ ಎರಡು ಸ್ವೀಟ್ ಟೂತ್ ಇತ್ತು ದೊಡ್ಡದು

ಅರ್ಧ ಕೊಟ್ರೆ ಸಾಲ್ದು ನನಗೆ ಅಷ್ಟೂ ಬೇಕು ಅಂತ

ಭಾರ ಆಯ್ತು ಹೊಟ್ಟೆ ತಿಂತಾ ತಿಂತಾ 

ಅಯ್ಯೋ ಇನ್ನೂ ಏನೇನೋ ಇದೆ ತಿನ್ನೋದಕ್ಕೆ ಮಜಾ ಮಜಾ ತಿಂಡಿ!

ನೀನು ಕೇಕ್‌ನಲ್ಲೇ ಹೊಟ್ಟೆ ತುಂಬ್ಕೊಂಡಿ!

ವಾಕಿಂಗ್ ಹೋಗ್ ಬಾ ಒಂದು ರೌಂಡು, ಫ್ರೆಂಡ್ಸ್ ಬರೋದಕ್ಕೆ ಮುಂಚೆ

ತಿಂದಿದ್ದು ಕರಗಿ ಸ್ವಲ್ಪ ಹಸಿವೆ ಆಗುತ್ತೆ

ಗಣೇಶನ ಹತ್ರ ಒಂದು ಮಿಕ್ಕಿ ಮೌಸ್ ಇತ್ತು

ಅದರ ಮೇಲೆ ಕೂತ್ಕೊಂಡು ಹೊರಟ ಟುಕುಟುಕು

ಅಲ್ಲೊಂದು ಸ್ನೇಕ್ ಇತ್ತಂತೆ ಭುಸ್ ಅಂತ ಹೆಡೆ ಬಿಚ್ಕೊಂಡು

ಮಿಕ್ಕಿ ಪುಕ್ಕಲ!  ಓಡಿದ ನೋಡು ಗಣೇಶನ್ನೂ ಹೊತ್ಕೊಂಡು! 

ಪಾಪ ಮುಗ್ಗರಿಸಿ ಬಿದ್ದ ಒಂದು ಕಡೆ

ಅರ್ಧ ಮುರೀತು ಗಣೇಶನ ಒಂದು ಸ್ವೀಟ್ ದವಡೆ

ಪಾಪ ಢಮ್ ಅಂತ ಒಡೆದು ಗಣೇಶನ ಸ್ಟಮಕ್ಕು

ಚೆಲ್ಲಾಪಿಲ್ಲಿ ಆಗೋಯ್ತು ಒಳಗಿದ್ದ ಕೇಕು

ಅದನ್ನೆಲ್ಲಾ ಹಾಗೇ ಹೊಟ್ಟೇಲಿ ಸ್ಟಫ್ ಮಾಡಿ

ಹಾವನ್ನೇ ಬೆಲ್ಟ್ ಥರಾ ಕಟ್ಕೊಂಡ ಟೈಟಾಗಿ

ಮತ್ತೆ ಕೂತ್ಕೊಂಡು ಮಿಕ್ಕಿ ಮೌಸ್  ಮೇಲೆ

ವಾಪಸ್ ಬಂದ ಆರಾಮಾಗಿ ಏನೂ ಆಗದಿರೋ ಹಾಗೆ

ಮಗನ್ನ ನೋಡಿ ಮಮ್ಮಿಗೆ ಏನು ಸಂತೋಷ!

ಕ್ಲಿಕ್ ಮಾಡಿದ್ಲು ಫೋಟೋ ತಂದಿದ್ದೇ ಕ್ಯಾಮೆರಾ

ಗಣೇಶನ ಫೇಸ್ ಬುಕ್ ಅಕೌಂಟ್‌ಗೆ ಲಾಗಿನ್ ಆಗ್ಬಿಟ್ಟು

ಅಪ್ ಲೋಡ್ ಮಾಡಿದ್ಲು ಇಮೇಜ್ ಒಂದು ನಲವತ್ತು

ಎಲ್ರೂ ಲೈಕ್ ಮಾಡಿದರೆ ಚಂದ್ರ ಮಾತ್ರ

ಏನೋ ತಲೆಹರಟೆ ಕಾಮೆಂಟ್ ಮಾಡ್ದ, ಧೂರ್ತ!

ಗಣೇಶನಿಗೆ ಸರ್ ಅಂತ  ಕೋಪ ಬಂತು

ಹ್ಯಾಕ್ ಮಾಡಿ ಕೂಡ್ಲೇ ಚಂದ್ರನ ಅಕೌಂಟು

ಚಂದ್ರನ ಫ್ರೋಫೈಲ್ ಪಿಕ್ಚರ್‌ನ

ಮಾಡ್ಬಿಟ್ಟ ಬ್ಲಾಕ್ ಔಟ್ ತಕ್ಷಣ

ಚಂದ್ರನಿಗೆ ಪಾಪ ತುಂಬಾ ಅವಮಾನ ಆಗಿ

ಫೇಸ್ ಬುಕ್ ಅಕೌಂಟ್‌ನೇ ಡಿಲೀಟ್ ಮಾಡಿ

ಅಳ್ತಾ ಕೂತ್ಕೊಂಡ ಮನೇಲಿ ಒಬ್ನೇ

ಪಾಪ ಗಣೇಶನ ಪಾರ್ಟೀಗೂ ಬರ್ದೇ

ಚಂದ್ರನ ಫ್ರೆಂಡ್ಸ್ ಇದ್ರಲ್ಲ, ಪಾಪ

ತುಂಬಾ ಬೋರ್ ಹೋಡೀತು ಅವರಿಗೆಲ್ಲ ಈಗ

ನಿನ್ ಹಾಗೇ ಅವರೂ

ದಿನಾ ಚಂದ್ರನ್ನ ನೋಡ್ಬೇಕು

ನೋಡ್ದೆ ಇದ್ದರೆ ಚಂದ್ರನ ಪ್ರೊಫೈಲ್ ಪಿಕ್ಚರ್

ಕೆಲವರು ಊಟಕ್ಕೇ  ಹಾಕ್ತಿದ್ದ್ರು ಚಕ್ಕರ್

ಶೇರ್ ಮಾಡ್ತಿದ್ದ ಇಡೀ ರಾತ್ರಿ ಜೋಕ್ಸ್ ಎಟ್ಸೆಟೆರಾ

ಈಗ ನೋಡಿದ್ರೆ ಅಲ್ಲಿ ಬರೀ ರವಿಕುಮಾರ್ ಪದ್ಯ

ಅವರೆಲ್ಲಾ ಕಳ್ಸಿದ್ರು ಗಣೇಶನಿಗೆ ಈ-ಮೇಲ್

ಚಂದ್ರನ್ನ ಕ್ಷಮಿಸಿಬಿಡು ಪ್ಲೀಸ್

ಅವನಾಗಲೇ ಹೇಳಾಯ್ತು ಸಾರಿ

ಅದಾಗಲೇ ಶೇರ್ ಆಗಿದೆ ಸಾವಿರ ಸಾರಿ

ಇನ್ನೂ ಯಾಕಪ್ಪಾ ನಿನಗೆ ಫ್ರೆಂಡ್ ಮೇಲೆ ಕೋಪ

ನೋಡು ಈ ಫೋಟೋದಲ್ಲಿ  ಅಳ್ತಾ ಇದಾನೆ ಪಾಪ

ಗಣೇಶನಿಗೆ ಕೊನೇಗೆ ಸಮಾಧಾನ ಆಯ್ತು

ಸೇ ಅಂದ ಸ್ಮೈಲ್ ಮಾಡಿ (ಬಿಟ್ಬಿಟ್ಟಿದ್ನಲ್ಲ ಟೂ)

ಆದರೆ ನನ್ನ ಬರ್ತ್ ಡೇ ದಿನ ಮಾತ್ರ

ಯಾರೂ ನೋಡ್ಬಾರದು ಚಂದ್ರನ ಪ್ರೊಫೈಲ್ ಚಿತ್ರ

ಹಾಗಂತ ಹಾಕ್ದ ಗಣೇಶ ಕಂಡೀಶನ್

ಒಟ್ನಲ್ಲಿ ಕತೆಗೆ ಹ್ಯಾಪಿ ಎಂಡಿಂಗ್

ವಿಸಿಟ್ ಮಾಡಬಾರದು ಚಂದ್ರನ ಪೇಜ್ ಅವತ್ತು

ಮಾಡಿದ್ರೆ ಸಿಗೋದಿಲ್ಲ ನೋಡು ಚಕ್ಲಿ ಒಬ್ಬಟ್ಟು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry