ಶನಿವಾರ, ಜೂನ್ 19, 2021
24 °C
ಗಣೇಶಗುಡಿಯಲ್ಲಿ ಕಿರು ಅಣೆಕಟ್ಟು ಯೋಜನೆಗೆ ವಿರೋಧ

ಗಣೇಶಪಾಲ್‌ನಲ್ಲಿ ಜನಜಾಗೃತಿ ಸಮಾವೇಶ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ತಾಲ್ಲೂಕಿನ ಗಡಿಭಾಗವಾದ ಗಣೇಶ ಗುಡಿಯಲ್ಲಿ ಮಿನಿ ಜಲ ವಿದ್ಯುತ್ ಯೋಜನೆಗಾಗಿ ಅಣೆಕಟ್ಟು ನಿರ್ಮಿಸಲು ಖಾಸಗಿ ಕಂಪೆನಿಗೆ ಅನುಮತಿ ನೀಡಲಾಗಿದೆ ಎಂಬ ಹಿನ್ನೆಲೆಯಲ್ಲಿ  ಶಾಲ್ಮಲಾ ಕಣಿವೆ ಸಂರಕ್ಷಣಾ ಸಮಿತಿ ಹಿತ್ಲಳ್ಳಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ ಪೂರ್ವ ಭಾವಿ ಸಭೆ ನಡೆಸಿತು.  ಈ ಸಂದರ್ಭದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ‘ಅಕ್ರಮವಾಗಿ ನಿರ್ಮಾಣಗೊಳ್ಳಲಿರುವ ಅಣೆಕಟ್ಟು ಆಗದಂತೆ ತಡೆಯುವುದು ನಮ್ಮ ಹೋರಾ ಟದ ಮೂಲ ಧ್ವನಿ-ಧ್ಯೇಯವಾಗಿದೆ’ ಎಂದರು.ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ಭಟ್ಟ, ಸಂರಕ್ಷಣಾ ಸಮಿತಿ ಅಧ್ಯಕ್ಷ ವಿ. ಆರ್. ಹೆಗಡೆ ಮಣ್ಮನೆ, ಉತ್ತರ ಕನ್ನಡ ಬಚಾವೋ ಆಂದೋಲನದ ಪ್ರಮುಖ ಶಿವರಾಮ ಗಾಂವ್ಕರ್, ಹಿತ್ಲಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸದಾಶಿವ ಭಟ್ಟ ಹರಿಗದ್ದೆ, ಸ್ವರ್ಣವಲ್ಲಿ ಮಠದ ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ಶಿರನಾಲಾ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಹೆಗಡೆ ಹಿರೇಸರ ಮಾತನಾಡಿದರು.ವನವಾಸಿ ಕಲ್ಯಾಣದ ಶಾಂತಾರಾಮ ಸಿದ್ದಿ, ಸಂರಕ್ಷಣಾ ಸಮಿತಿ ಕಾರ್ಯದರ್ಶಿ ರಮಾಕಾಂತ ಹೆಗಡೆ ಮಂಡೇಮನೆ, ಕುಂದರಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೇರಂಭ ಹೆಗಡೆ, ಸಂರಕ್ಷಣಾ ಸಮಿತಿ ಪ್ರಮುಖ ಜಿ. ಆರ್. ಭಟ್ಟ ಕುಂಬಾರಕೊಟ್ಟಿಗೆ, ಗ. ಸು. ಭಟ್ಟ ಇಳೇಗುಂಡಿ ವೇದಿಕೆಯಲ್ಲಿದ್ದರು. ಹಿತ್ಲಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಡಿ.ಟಿ.ಹೆಗಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿರ್ಣಯಗಳು: ಶಾಲ್ಮಲಾ ನದಿ ಕಣಿವೆಯಲ್ಲಿ ಜಲವಿದ್ಯುತ್ ಯೋಜನೆ, ನದಿ ತಿರುವು ಯೋಜನೆ ಮತ್ತು ನದಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಯೋಜನೆಗಳು ಬೇಡ ಹಾಗೂ ಈ ಪ್ರದೇಶದಲ್ಲಿ ಪರಿಸರಕ್ಕೆ ಹಾನಿ ಮಾಡುವ ಯಾವುದೇ ಯೋಜನೆಗಳನ್ನು ಶಾಶ್ವತವಾಗಿ ಕೈಬಿಡಬೇಕು; ಗಣೇಶಪಾಲ್‌ ಕೊಳ್ಳದ ಸುತ್ತಮುತ್ತಲ ಗ್ರಾಮಗಳಲ್ಲಿ ಯಾವುದೇ ಇಲಾಖೆಯಿಂದ ಯಾವುದೇ ಚಟುವಟಿಕೆಗಳನ್ನು ಆರಂಭಿಸುವುದಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯ್ತಿ ಜಾಗೃತ ಸಮಿತಿಯ ಗಮನಕ್ಕೆ ತರಲೇಬೇಕು; ಸದರಿ ಉದ್ದೇಶಿತ ಅಣೆಕಟ್ಟು ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿಯಿಂದ ನಿರಾಕ್ಷೇಪಣಾ ಪತ್ರ ನೀಡಬಾರದು; ಪರಮಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ ಹಾಗೂ ಸೋದೆ ಸ್ವಾಮೀಜಿ ಯವರು ಈ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಿದ್ದು, ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂಬ ನಾಲ್ಕು ಪ್ರಮುಖ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.