ಗಣೇಶೋತ್ಸವ: ಪರವಾನಗಿ `ಏಕಗವಾಕ್ಷಿ' ವ್ಯವಸ್ಥೆ

7

ಗಣೇಶೋತ್ಸವ: ಪರವಾನಗಿ `ಏಕಗವಾಕ್ಷಿ' ವ್ಯವಸ್ಥೆ

Published:
Updated:

ವಿಜಾಪುರ: ಸಾರ್ವಜನಿಕ ಗಣೇಶ ಉತ್ಸವ ಮಂಡಳಿಯವರಿಗೆ ನಗರಸಭೆ, ಹೆಸ್ಕಾಂ, ಪೊಲೀಸ್ ಇಲಾಖೆಯ ಪರವಾನಗೆಯನ್ನು ಒಂದೇ ಸ್ಥಳದಲ್ಲಿ ನೀಡಲಾಗುವುದು. ಅದಕ್ಕಾಗಿ ಇಲ್ಲಿಯ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಸಿದ್ದಪ್ಪ ಹೇಳಿದರು.ನಗರದ ಗಜಾನನ ಉತ್ಸವ ಮಹಾ ಮಂಡಳದ ಸಭೆಯಲ್ಲಿ ಅವರು ಮಾತನಾಡಿದರು.ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಈ ಬಾರಿ ಗಜಾನನ ಉತ್ಸವವನ್ನು ರಾಜ್ಯದಲ್ಲಿಯೇ ಮಾದರಿ ಯಾಗಿ ಆಚರಿಸಬೇಕು. ದೇಶ ಭಕ್ತಿಯ ಕಾರ್ಯಕ್ರಮ ಆಯೋಜಿಸಬೇಕು. ಉತ್ತಮ ಅಲಂಕಾರ ಮತ್ತು ಉತ್ತಮ ಗಣೇಶ ವಿಗ್ರಹಕ್ಕೆ ಗಜಾನನ ಉತ್ಸವ ಮಹಾಮಂಡಳಿಯಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದರು.ಎ.ಎಸ್.ಪಿ. ಆರ್. ಚೇತನ, ಸಾರ್ವಜನಿಕ ಗಣೇಶ ಮಂಡಳಿಯವರು ಸಾರ್ವಜನಿಕರಿಂದ ಬಲವಂತವಾಗಿ ವಂತಿಗೆ ಸಂಗ್ರಹಿಸಬಾರದು. ಮೆರ ವಣಿಗೆಯ ಸಮಯದಲ್ಲಿ ಸಾರ್ವಜ ನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಮದ್ಯಪಾನ ಮಾಡಿ ವೆುರವಣಿಗೆಯಲ್ಲಿ ಭಾಗವಹಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ, ಗಜಾನನ ಮಂಡಳಿ ಯವರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕೋರಿದರು. ಹೆಸ್ಕಾಂ ಅಧಿಕಾರಿ ಜಿ.ಕೆ. ಗೋಟ್ಯಾಳ, ಪೌರಾಯುಕ್ತ ರಾಮದಾಸ ಮಾತನಾಡಿದರು.ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಮಹಾಮಂಡಳದ ಅಧ್ಯಕ್ಷ ವಿಜಯ ಕೋವಳ್ಳಿ, ಪ್ರಧಾನ ಕಾರ್ಯ ದರ್ಶಿ ಜಗದೀಶ ಮುಚ್ಚಂಡಿ, ನಗರ ಸಭೆಯ ಮಾಜಿ ಅಧ್ಯಕ್ಷ ಮಿಲಿಂದ ಚಂಚಲಕರ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವಿ ಬಿಜ್ಜರಗಿ, ಸದಾಶಿವ ಗುಡ್ಡೋಡಗಿ, ಗಂಗಾಧರ ಸಂಬಣ್ಣಿ, ಭೀಮಾಶಂಕರ ಹದನೂರ, ಅಶೋಕ ನ್ಯಾಮಗೊಂಡ ಇತರರು ಪಾಲ್ಗೊಂ ಡಿದ್ದರು.

ಶಿವರುದ್ರ ಬಾಗಲಕೋಟೆ ಸ್ವಾಗತಿಸಿದರು, ಶಂಕರ ಕುಂಬಾರ ವಂದಿಸಿದರು.ಪರಿಸರ ಸ್ನೇಹಿ ಗಣೇಶ ಉತ್ಸವಕ್ಕೆ ಮನವಿ: ಗಣೇಶ ಉತ್ಸವ ಸಂದರ್ಭ ಗಳಲ್ಲಿ ಪರಿಸರ ಸ್ನೇಹಿ ಗಣಪತಿ ವಿಗ್ರಹ ಗಳ ಸ್ಥಾಪನೆ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಗಳನ್ನು ಪಾಲಿಸುವಂತೆ ಜಿಲ್ಲಾ ಆಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ.ಪರಿಸರ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಬಣ್ಣರಹಿತವಾದ ಮಣ್ಣಿ ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಸುಟ್ಟ ಮಣ್ಣಿನಿಂದ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ತಯಾರಿಸಿದ ಮೂರ್ತಿ ಬಳಕೆಬೇಡ. ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಮುನ್ನ ಹೂವು, ಅಲಂಕಾರಿಕ ವಸ್ತ್ರ, ಇತರ ಪೂಜಾ ಸಾಮಗ್ರಿಗಳನ್ನು ಹಾಗೂ ಕಾಗದ ಮತ್ತು ಪ್ಲಾಸ್ಟಿಕ್‌ನಿಂದ ತಯಾರು ಮಾಡಿದ ಅಲಂಕಾರಿಕ ವಸ್ತುಗಳನ್ನು ಪ್ರತ್ಯೇಕಿಸಿ ಕಸವಿಲೇವಾರಿ ಸ್ಥಳಗಳಿಗೆ ನೀಡಬೇಕು.  

   

ಬಟ್ಟೆಗಳನ್ನು ಸ್ಥಳೀಯ ಅನಾಥಾ ಶ್ರಮಗಳಿಗೆ ನೀಡಬೇಕು. ಗಣೇಶ ಮೂರ್ತಿಗಳನ್ನು ಬಕೆಟ್ ಅಥವಾ ಪ್ರತ್ಯೇಕ ತೊಟ್ಟಿಗಳನ್ನು ತಯಾರಿಸಿ ಅದರಲ್ಲಿ ವಿಸರ್ಜನೆ ಮಾಡಬೇಕು ಎಂದು ಕೋರಿದೆ.ಶಾಂತಿಗೆ ಮನವಿ: ಜಿಲ್ಲಾ ಪೊಲೀಸ್ ಇಲಾಖೆ ನಗರದಲ್ಲಿ ಶಾಂತಿ ಸಮಿತಿ ಸಭೆ ನಡೆಸಿ, ಗಣೇಶೋತ್ಸವವನ್ನು ಶಾಂತ ರೀತಿಯಿಂದ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಬರದ ಹಾಗೆ ಆಚರಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದೆ.ಅಶ್ಲೀಲ ಹಾಡು ಮತ್ತು ಶಾಂತಿ ಭಂಗವನ್ನುಂಟು ಮಾಡುವಂತಹ ಸಿನಿಮಾ ಹಾಡುಗಳನ್ನು ಹಾಕದೇ ಭಕ್ತಿ ಗೀತೆಗಳನ್ನು ಹಾಕಬೇಕು.  ಗಣೇಶ ವಿಗ್ರಹ, ಶಾಮಿಯಾನಗಳನ್ನು ದಿನದ 24 ಗಂಟೆಗಳ ಕಾಲ ಕಾಯಲು ಪೊಲೀಸ್ ಸಿಬ್ಬಂದಿಯವರೊಂದಿಗೆ ಸಮಿತಿ ಸದಸ್ಯ ರನ್ನು ನೇಮಿಸಬೇಕು. ಶಬ್ದಮಾಲಿನ್ಯ ವಾಗದಂತೆ ನೋಡಿ ಕೊಳ್ಳಬೇಕು ಎಂದು ಸಭೆಯ ನೇತೃತ್ವ ವಹಿಸಿದ್ದ ಹೆಚ್ಚುವರಿ ಎಸ್ಪಿ ಎಫ್.ಎ. ಟ್ರಾಸ್ಗರ್ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry