ಗಣೇಶೋತ್ಸವ: ರೂ. ಒಂದು ಕೋಟಿ ಬಿಡುಗಡೆ

7
ಜಿಲ್ಲಾ ಆಡಳಿತದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಗಣೇಶೋತ್ಸವ: ರೂ. ಒಂದು ಕೋಟಿ ಬಿಡುಗಡೆ

Published:
Updated:

ಬೆಳಗಾವಿ: ರಾಜ್ಯ ಸರ್ಕಾರ ನಗರದಲ್ಲಿ ಗಣೇಶೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಜಿಲ್ಲಾ ಆಡಳಿತ ಮಂಗಳವಾರದಿಂದ (ಸೆ. 10) ಸೆ. 17ರ ವರೆಗೆ ನಗರದ ವಿವಿಧ ಕಡೆಗಳಲ್ಲಿ ಕಾಯರ್ಕ್ರಮಗಳನ್ನು ಆಯೋಜಿಸಿದೆ.’ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ ಗಣೇಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಂಗಳವಾರ (ಸೆ. 10) ಸಂಜೆ 6.30ಕ್ಕೆ ಚಾಲನೆ ನೀಡಲಾಗುವುದು. ನಂತರ ಬೆಂಗಳೂರಿನ ಸುಗಮ ಸಂಗೀತ ಪರಿಷತ್‌ನ ವೈ.ಕೆ.ಮುದ್ದುಕೃಷ್ಣ ಅವರಿಂದ ಸುಗಮ ಸಂಗೀತ ನಡೆಯಲಿದೆ. ಸೆ. 17 ರವರೆಗೆ ಪ್ರತಿದಿನ ಸಂಜೆ 6ಕ್ಕೆ ಹಾಗೂ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸೆ. 14 ರಿಂದ 17 ರವರೆಗೆ ಪ್ರತಿದಿನ ಬೆಳಿಗ್ಗೆ 11ಕ್ಕೆ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಜಿಲ್ಲಾಧಿಕಾರಿ ಎನ್.ಜಯರಾಂ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ನಗರದ ವಿವಿಧ ಬಡಾವಣೆಗಳಲ್ಲೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾಯರ್ಕ್ರಮ ನಡೆಸಲು ಉದ್ದೇಶಿಸಲಾಗಿದೆ. ಸದ್ಯ ಈ ಎಲ್ಲ ಕಾಯರ್ಕ್ರಮಗಳಿಗೆ 30 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇದರಲ್ಲಿ ಕಲಾವಿದರಿಗೆ ಗೌರವಧನ, ವಸತಿ ಸೌಲಭ್ಯ, ವೇದಿಕೆ, ಸಾರಿಗೆ ವೆಚ್ಚ, ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್‌ ದೀಪಾಲಂಕಾರ, ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ತೆರಳುವ ಮಾರ್ಗಗಳ ಸುಧಾರಣೆ ಕಾಮಗಾರಿ, ಮೆರವಣಿಗೆ ವೀಕ್ಷಿಸಲು ಆಗಮಿಸುವರ ಜನರಿಗೆ ಕುಡಿಯುವ ನೀರಿನ ಸೌಕರ್ಯ, ಮೊಬೈಲ್‌ ಶೌಚಾಲಯ ವ್ಯವಸ್ಥೆ ಒದಗಿಸಲಾಗುವುದು ಎಂದರು.ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ರಾಜ್ಯದ 30 ಜಿಲ್ಲೆಗಳಿಂದ 30 ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಮಹಿಳೆಯರಿಗಾಗಿ ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು. ಒಟ್ಟಾರೆಯಾಗಿ ನಗರದಲ್ಲಿ ಉತ್ತಮ ಸಾಂಸ್ಕೃತಿಕ ಹಾಗೂ ಹಬ್ಬದ ವಾತಾವರಣ ಸೃಷ್ಟಿಸುವುದು ಸರ್ಕಾರದ ಉದ್ದೇಶವಾಗಿದೆ. ಗಣೇಶ ಮೂತಿರ್ಗಳಿಗೆ ಆಕಷರ್ಕ ಬಹುಮಾನ ನೀಡಲಾಗುವುದು. ಈ ಅನುದಾನವನ್ನು ಸಾಂಸ್ಕೃತಿಕ ಕಾಯರ್ಕ್ರಮಗಳಿಗೆ ಮಾತ್ರ ಬಳಸಬೇಕು ಎಂದು ಸರ್ಕಾರ ತಿಳಿಸಿದೆ ಎಂದು ಹೇಳಿದರು.ಕಾರ್ಯಕ್ರಮಗಳ ವಿವರ ಇಂತಿದೆ: ಲಿಂಗರಾಜ ಕಾಲೇಜು ಮೈದಾನದಲ್ಲಿ ಪ್ರತಿದಿನ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ. ಸೆ. 11 ರಂದು ಗೋಕಾಕನ ರತಿಕಾ ನೃತ್ಯ ನಿಕೇತನದ ನಾಗರತ್ನ ಹಡಗಲಿ ಅವರಿಂದ ನೃತ್ಯ ರೂಪಕ ಹಾಗೂ ನೂಲಗೇರಿಯ ಕೊಟ್ಟೂರೇಶ್ವರ ನಾಟ್ಯ ಸಂಘದ ಎಂ.ಎ.ಕೊಟ್ರೇಶ್ ಅವರಿಂದ ಸಂತ ಶಿಶುನಾಳ ಶರೀಫ್ ನಾಟಕ ಪ್ರದರ್ಶನ. 12 ರಂದು ಬೆಳಗಾವಿಯ ರವೀಂದ್ರ ಶರ್ಮ ಹಾಗೂ ಬೆಂಗಳೂರಿನ ಶಾಂಭವಿ ನೃತ್ಯ ಶಾಲೆಯ ವೈ. ಜಯಂತಿ ಕಾಶಿ ಅವರಿಂದ ನೃತ್ಯ ರೂಪಕ. 13ರಂದು ಬೆಳಗಾವಿಯ ರೇಖಾ ಹೆಗಡೆ ಅವರಿಂದ ನೃತ್ಯ ರೂಪಕ, ಧಾರವಾಡದ ಪಂ. ಶಫಿಕ್ ಖಾನ್ ಹಾಗೂ ಸಂಗಡಿಗರಿಂದ ಪ್ಯೂಸನ್ ಮ್ಯೂಸಿಕ್‌ ನಡೆಯಲಿದೆ.14 ರಂದು ಗದಗನ ಶಂಕ್ರಣ್ಣ ಸಂಕಣ್ಣವರ ಅವರಿಂದ ಜಾನಪದ ನೃತ್ಯ, ಧಾರವಾಡದ ಶ್ರೀಕಾಂತ ಕುಲಕರ್ಣಿ ಮತ್ತು ಸಂಗಡಗರಿಂದ ಸುಗಮ ಸಂಗೀತ. 15 ರಂದು ಬೆಳಗಾವಿಯ ಪಂ. ರಾಜಪ್ರಭು ಧೋತ್ರೆ ಅವರಿಂದ ರಂಗ ಸಂಗೀತ, ಬೈಲೂರಿನ ಬಸಲಿಂಗಯ್ಯ ಹಿರೇಮಠ ಅವರಿಂದ ಜಾನಪದ ಸಂಗೀತ. 16 ರಂದು ಮಂಗಳೂರಿನ ಕುದ್ರೊಳ್ಳಿ ಗಣೇಶ ಅವರಿಂದ ಜಾದೂ ಪ್ರದರ್ಶನ, ಬೆಂಗಳೂರಿನ ಅಜಯ್‌ ವಾರಿಯರ್ ಅವರಿಂದ ಸಂಗೀತ. 17 ರಂದು ಕೊಲ್ಲಾಪುರದ ಶುಕ್ಲಾ–-ಜಾಗೊ ಹಿಂದೂಸ್ತಾನಿ ಅವರಿಂದ ದೇಶಭಕ್ತಿ ಗೀತೆ ಕಾರ್ಯಕ್ರಮ ಹಾಗೂ ಹುಬ್ಬಳ್ಳಿಯ ಪಂ. ಜಯತೀರ್ಥ ಮೇವುಂಡಿ ಅವರಿಂದ ಗಾಯನ ಕಾರ್ಯಕ್ರಮಗಳು ನಡೆಯಲಿವೆ.ಕುಮಾರ ಗಂಧರ್ವ ರಂಗಮಂದಿರದಲ್ಲಿ ಸೆ. 14 ರಿಂದ 17 ರವರೆಗೆ ಪ್ರತಿದಿನ ಬೆಳಿಗ್ಗೆ 11ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 14 ರಂದು ಕುಂದಗೋಳದ ಎಂ.ಎಸ್.ಮಾಳವಾಡ ಅವರಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ದೊಡ್ಡಾಟ. 15 ರಂದು ಧಾರವಾಡದ ಅನೀಲ ದೇಸಾಯಿ ಮತ್ತು ಸಂಗಡಿಗರಿಂದ ಹಾಸ್ಯೋತ್ಸವ. 16 ರಂದು ಬೆಳಗಾವಿಯ ಶ್ರೀಧರ ಕುಲಕರ್ಣಿ ಅವರಿಂದ ರಂಗ ಸಂಗೀತ ಕಾರ್ಯಕ್ರಮ ಹಾಗೂ 17 ರಂದು ಶಿರೂರನ ಬಸವರಾಜ ಬೆಂಗೇರಿ ಅವರಿಂದ ಛತ್ರಪತಿ ಶಿವಾಜಿ ನಾಟಕ ಪ್ರದಶರ್ನ ನಡೆಯಲಿದೆ ಎಂದು ಜಯರಾಂ ವಿವರಿಸಿದರು.ಪಾಲಿಕೆ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry