ಗಣೇಶ ವಿಸರ್ಜನೆ- ಮದ್ಯ ಮಾರಾಟ ನಿಷೇಧ

7

ಗಣೇಶ ವಿಸರ್ಜನೆ- ಮದ್ಯ ಮಾರಾಟ ನಿಷೇಧ

Published:
Updated:

ಬೆಂಗಳೂರು: ಹಲಸೂರು ಸುತ್ತಮುತ್ತ ಭಾನುವಾರ (ಸೆ.22) ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆ ಮತ್ತು ವಿಸರ್ಜನೆ ಕಾರ್ಯಕ್ರಮ ನಡೆಯುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಆದೇಶ ಹೊರಡಿಸಿದ್ದಾರೆ.ಭಾರತಿನಗರ, ಶಿವಾಜಿನಗರ ,   ಕಮರ್ಷಿಯಲ್ ಸ್ಟ್ರೀಟ್ ಠಾಣೆ ವ್ಯಾಪ್ತಿಯಲ್ಲಿರುವ ಎಲ್ಲಾ ೀತಿಯ ಮದ್ಯದ ಅಂಗಡಿಗಳನ್ನು ಬಂದ್‌ ಮಾಡಬೇಕು ಎಂದು ಔರಾದಕರ್‌ ತಿಳಿಸಿದ್ದಾರೆ.ಆರ್‌ಬಿಎಎನ್ಎಂಎಸ್ ಮೈದಾ ನದ ಸಮೀಪ ಇರುವ ನಾಗದೇವತೆ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಿರುವ 4,550 ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆ ಮಧ್ಯಾಹ್ನ ಆರಂಭವಾಗಲಿದೆ.ನಂತರ ವೀರಪಿಳ್ಳೈ ಸ್ಟ್ರೀಟ್, ಧರ್ಮ ರಾಜ ದೇವಸ್ಥಾನ ಬೀದಿ, ಸೆಪ್ಪಿಂಗ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಕಾಮರಾಜ ರಸ್ತೆ, ಸೇಂಟ್ ಜಾನ್ಸ್ ರಸ್ತೆ, ಎಎಸ್ಎಂ ರಸ್ತೆ ಮೂಲಕ ಮೆರ ವಣಿಗೆ ಸಾಗಿ ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾ ಗುತ್ತದೆ. ಮೆರವ ಣಿಗೆಯಲ್ಲಿ ಸಾಕಷ್ಟು ಜನ ಭಾಗವಹಿಸುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry