`ಗಣೇಶ ಹಬ್ಬ ಶಾಂತಿಯಿಂದ ಆಚರಿಸಿ'

7

`ಗಣೇಶ ಹಬ್ಬ ಶಾಂತಿಯಿಂದ ಆಚರಿಸಿ'

Published:
Updated:

ಹುಕ್ಕೇರಿ: ಗಣೇಶ ಹಬ್ಬದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಂಡು ಹಬ್ಬವನ್ನು ಆಚರಿಸಬೇಕು ಎಂದು   ಸಿಪಿಐ ಎಸ್.ಬಿ. ಗಿರೀಶ್  ಹೇಳಿದರು.ಪಟ್ಟಣ ಪಂಚಾಯಿತಿ  ಸಭಾಗೃಹದಲ್ಲಿ ಗಣೇಶ ಹಬ್ಬದ ನಿಮಿತ್ಯ ಮಂಗಳವಾರ ಜರುಗಿದ ಶಾಂತಿ ಪಾಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಮಂಟಪ ನಿರ್ಮಾಣ ಮಾಡುವಾಗ ರಸ್ತೆಗೆ ಅಡೆ ತಡೆ ಆಗದಂತೆ ನಿರ್ಮಾಣ ಮಾಡುವುದು, ಗಣೇಶ ಮೂರ್ತಿ ಮೆರವಣೆಗೆ ಸಮಯದಲ್ಲಿ ಸಿಡಿ ಮದ್ದು ಮೇಲಕ್ಕೆ ಹಾರಿಸದಿರುವುದು, ಮೂರ್ತಿಗಳ ವಿಸರ್ಜನೆ ಸಮಯದಲ್ಲಿ ಡಾಲಬಿಯನ್ನು ನಿಷೇದಿಸಲಾಗಿದೆ. ಯಾರಾದರೂ ಉಪಯೋಗಿಸಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.ಯಾವುದೇ ಸಮಸ್ಯೆ ಉದ್ಬವಿಸಿದರೂ ತಕ್ಷಣ ಪೊಲೀಸ್ ಇಲಾಖೆಗೆ ದೂರವಾಣಿ ಕರೆ ಮಾಡಬೇಕು. ಶಾಂತಿ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.ತಹಶೀಲ್ದಾರ್ ಶೇಖ್ ಕಲಿಮುಲ್ಲಾ  ಮಾತನಾಡಿ, ಗಣೇಶ ಉತ್ಸವದಲ್ಲಿ ಹಿರಿಯರು ಯುವಕರಿಗೆ ಮಾರ್ಗದರ್ಶನ ನೀಡಿ ಒಂದುಗೂಡಿ ಹಬ್ಬ ಆಚರಿಸಲು ಕೋರಿದರು. ಎಸ್‌ಐ ರಮೇಶ ಛಾಯಾಗೋಳ ಕಾನೂನು ಸುವ್ಯವಸ್ಥೆ ಪಾಲಿಸಬೇಕಾದ ನಿಯಮಗಳ ಕುರಿತು ಹೇಳಿದರು.ಬಹುಮಾನ: ಕಳೆದ ವರ್ಷ ಪಟ್ಟಣದಲ್ಲಿ ಪ್ರಥಮವಾಗಿ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಮಾಡಿದ ಲಕ್ಷ್ಮಿಗಣೇಶ ಯುವಕ ಮಂಡಳಕ್ಕೆ ಬಸ್ತವಾಡ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರವಿಂದ್ರ ಬಸ್ತವಾಡ ಅವರು ರೂ 5 ಸಾವಿರ ಹಾಗೂ ರವಿ ಕರಾಳೆ ಜೊಂಡ ಗಲ್ಲಿಯ ಯುವಕ ಮಂಡಳಕ್ಕೆ ಬಹುಮಾನ ನೀಡಿದರು. ಪ.ಪಂ.ಸದಸ್ಯರು, ಗಣ್ಯರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.ಮುಖ್ಯಾಧಿಕಾರಿ ಮೋಹನ ಜಾಧವ ಸ್ವಾಗತಿಸಿದರು. ಸಿಪಿಐ ಎಸ್.ಬಿ.ಗಿರೀಶ ವಂದಿಸಿದರು.ಸಭೆ ಇಂದು

ನಾಗನೂರ (ಮೂಡಲಗಿ
):  ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಪ್ರಸಕ್ತ ಸಾಲಿನ 19ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಇದೇ 6 ರಂದು ಬೆಳಿಗ್ಗೆ 10ಕ್ಕೆ ಸಂಸ್ಥೆಯ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮಹೇಶ ಕುಲಕರ್ಣಿ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry