ಗದಗ ತಂಡಕ್ಕೆ ಭರ್ಜರಿ ಜಯ

7

ಗದಗ ತಂಡಕ್ಕೆ ಭರ್ಜರಿ ಜಯ

Published:
Updated:

ಕಾರವಾರ: ಮಹಮ್ಮದ್ ಆರೀಫ್ (31) ಮತ್ತು ಮಹಮ್ಮದ್ ಆಸಿಫ್ (18ಕ್ಕೆ3) ಅವರ ಉತ್ತಮ ಆಟದಿಂದಾಗಿ ಗದಗ ತಂಡ ಅತಿಥೇಯ ತಂಡದ ಎದುರು ಭರ್ಜರಿ ಜಯ ದಾಖಲಿಸಿತು.ನಗರದ ಮಾಲಾದೇವಿ ಮೈದಾನದಲ್ಲಿ ಬುಧವಾರ ನಡೆದ ಬೆಳಗಾವಿ ವಿಭಾಗ ಮಟ್ಟದ 16 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಮೊದಲು ಬ್ಯಾಟ್ ಮಾಡಿದ ಕಾರವಾರ ತಂಡವು 14.1 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 89 ರನ್ ಗಳಿಸಿತು.ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಗದಗ ತಂಡವು 11 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 90 ರನ್ ಗಳಿಸಿತು.ಸ್ಕೋರು ವಿವರ: ಕಾರವಾರ ತಂಡ- 14.1 ಓವರ್‌ಗಳಲ್ಲಿ ಎಲ್ಲ ವಿಕೆಟ್ ನಷ್ಟಕ್ಕೆ 89 ರನ್: ವಿನಾಯಕ 32; ಮಹಮ್ಮದ್ ಆಸಿಫ್ 18ಕ್ಕೆ3. ಗದಗ ತಂಡ- 11 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 90: ಮಹಮ್ಮದ್ ಆರಿಫ್ 31. ಮಹಮ್ಮದ್ ಐಸಾಕ್ 19; ಸಂದೇಶ 7ಕ್ಕೆ1.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry