ಶನಿವಾರ, ಮೇ 15, 2021
23 °C

ಗಬ್ಬೆದ್ದು ನಾರುವ ಹಳ್ಳದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಹಟ್ಟಿ/ರಬಕವಿ: `ರಬಕವಿ ನಗರದ ಹನುಮಾನ ದೇವಸ್ಥಾನದ ಎದುರಿಗೆ ಇರುವ  ಹಳ್ಳದಲ್ಲಿ ನಗರದ ಚರಂಡಿ ಸೇರುತ್ತಿದ್ದು, ಈ ನೀರು ಮುಂದೆ ಹರಿಯದೆ ಅಲ್ಲಿಯೇ ನಿಂತಿರುವುದರಿಂದ ಹಳ್ಳದ ನೀರು ಗಬ್ಬೆದ್ದು ನಾರುತ್ತಿದೆ. ಹಳ್ಳದ ನೀರು ಮುಂದೆ ಹೋಗದಂತೆ ಅಲ್ಲಿ ಅಡೆತಡೆ ಮಾಡಲಾಗಿದೆ.

ಮಲಿನಗೊಂಡ ನೀರಿನಲ್ಲಿ ಸೊಳ್ಳೆಗಳು ಹೆಚ್ಚಿವೆ. ಜೊತೆಗೆ ಸುತ್ತ ಮುತ್ತಲಿನ ಜನರಿಗೆ ರೋಗಗಳ ಭೀತಿ ಕಾಡುತ್ತಿದೆ. ಹಳ್ಳಕ್ಕೆ ಬಣ್ಣ ಹಾಕುವ ಕಾರ್ಖಾನೆಯ ನೀರು ಸೇರುತ್ತಿರುವುದರಿಂದ ತೊಂದರೆಯಾಗಿದೆ' ಎಂದು ಕಲ್ಲಪ್ಪ ಕಿತ್ತೂರ ತಿಳಿಸಿದರು.

ನಿತ್ಯ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ನೀಡಿ ಹಳ್ಳವನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕೆಂದು ಸ್ಥಳೀಯ ಸುರೇಶ ತುಂಗಳ, ಕಡಕೋಳ, ಸಾಗರ, ಕಲ್ಲಪ್ಪ ಕುಂಬಾರ ಇತರರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.